Ultimate magazine theme for WordPress.

Post office: ಪೋಸ್ಟ್ ಆಫೀಸ್ ಬೆಸ್ಟ್ ಪ್ಲಾನ್, ಕೇವಲ 399 ರೂಪಾಯಿಗೆ ಸಿಗುತ್ತೆ ರೂ.10 ಲಕ್ಷ ಬೆನಫಿಟ್ಸ್

Post office: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank) ಹೊಚ್ಚಹೊಸ ಆಕ್ಸಿಡೆಂಟಲ್ ಇನ್ಶೂರೆನ್ಸ್ ಪಾಲಿಸಿಯನ್ನು ಜಾರಿಗೆ ತಂದಿದೆ.

0

Post office:  ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಇನ್ಶೂರೆನ್ಸ್ (Insurance) ಮಾಡಿಸಿಕೊಳ್ಳುವುದು ಉತ್ತಮ ಏಕೆಂದರೆ ನಡೆಯಬಾರದ್ದು ಏನಾದರೂ ನಡೆದುಹೋದರೆ ಅದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾದರೂ ಇನ್ಶೂರೆನ್ಸ್ (Insurance) ಎನ್ನುವುದು ಅಷ್ಟೋ ಇಷ್ಟೋ ಆರ್ಥಿಕ ನೆರವನ್ನು ನೀಡುತ್ತೆ.

ಪ್ರೈವೇಟ್ ಕಂಪನಿಗಳು ಕೊಡುವ ಇನ್ಶೂರೆನ್ಸ್ (Private Companies Insurance) ತುಂಬಾ ದುಬಾರಿಯಾಗಿರುತ್ತದೆ. ಅವುಗಳನ್ನು ಬಡ ಮತ್ತು ಮಧ್ಯಮ ಕುಟುಂಬಗಳು ತೆಗೆದುಕೊಂಡು ಅದರ ಪ್ರಯೋಜನ (Benefits) ಪಡೆಯಲು ಆಗುವುದಿಲ್ಲ ಆದ್ದರಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂಚೆ ಇಲಾಖೆ (Department of Posts) ನೀಡುತ್ತಿರುವ ವಿಮಾ ಸೌಲಭ್ಯದ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ. ಬನ್ನಿ ಆ ಇನ್ಶೂರೆನ್ಸಿನ ಹಾಗುಹೋಗುಗಳ ಕುರಿತು ವಿವರವಾಗಿ ತಿಳಿದುಕೊಳ್ಳೋಣ

ಕಡಿಮೆ ವೆಚ್ಚದಲ್ಲಿ 10 ಲಕ್ಷ ವಿಮೆ ಸೌಲಭ್ಯ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank) ಹೊಚ್ಚಹೊಸ ಆಕ್ಸಿಡೆಂಟಲ್ ಇನ್ಶೂರೆನ್ಸ್ ಪಾಲಿಸಿಯನ್ನು (Accidental Insurance Policy) ಜಾರಿಗೆ ತಂದಿದೆ. ಟಾಟಾ ಎಐಜಿ (Tata AIG) ಸಹಯೋಗದೊಂದಿಗೆ ಈ ಪಾಲಿಸಿಯನ್ನು ರೂಪಿಸಿದೆ. ಇದರಲ್ಲಿ ವರ್ಷಕ್ಕೆ 299 ರೂಪಾಯಿ, 399 ರೂಪಾಯಿಯಂತಹ ಕಡಿಮೆ ಪ್ರೀಮಿಯಂನೊಂದಿಗೆ ರೂ. 10 ಲಕ್ಷ ವಿಮೆಯನ್ನು ಪಡೆಯಬಹುದು.

18 ರಿಂದ 65 ವರ್ಷದೊಳಗಿನ ವಯೋಮಾನದವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಮೂಲಕ ಮಾತ್ರವೇ ಈ ಪಾಲಿಸಿಗೆ ಸಂಬಂಧಿಸಿದ ಪೀಮಿಯಂ (Premium) ಕಟ್ಟಬೇಕಾಗುತ್ತೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿ ತಪ್ಪದೇ ಖಾತೆಯನ್ನು ಹೊಂದಿರಬೇಕು. 299 ರೂಪಾಯಿ, 399 ರೂಪಾಯಿ ಪ್ರೀಮಿಯಂ ಪಾಲಿಸಿಯ ಅರ್ಹತೆಗಳು ಒಂದೇ ಆಗಿದ್ದರು ಅದರ ಪ್ರಯೋಜನಗಳು ವಿಭಿನ್ನವಾಗಿರುತ್ತವೆ.

ಇದನ್ನು ಓದಿ: ನೀವು ಪೋಸ್ಟ್ ಆಫೀಸಿನಲ್ಲಿ ಹಣ ಹೂಡಿಕೆ ಮಾಡಿದ್ದೀರಾ, ಹಾಗಿದ್ದರೆ ಸರ್ಕಾರ ಮಾಡಿರುವ ಈ ಬದಲಾವಣೆಯ ಬಗ್ಗೆ ತಿಳಿಯಿರಿ

ರೂ. 399 ಪಾಲಿಸಿಯೊಂದಿಗೆ ಸಿಗುವ ಪ್ರಯೋಜನಗಳು ಹೀಗಿವೆ

ರೂ. 399  ರೂಪಾಯಿ ಪಾವತಿಸಿ ಪೋಸ್ಟ್ ಆಫೀಸ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಂಡವರು ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ (Permanent Disability) ಗುರಿಯಾದರೆ ಇಲ್ಲಾ ಪಾರ್ಶ್ವವಾಯು (Paralysis) ಕಾಯಿಲೆಗೆ ತುತ್ತಾದರೆ ರೂ. 10 ಲಕ್ಷ ವಿಮೆ ದೊರೆಯುತ್ತೆ.

deposit 5 lakh in lump sum after 5 year you will get 2 25 lakh interest
Photo Credit : Original Source

ಪಾಲಿಸಿ ತೆಗೆದುಕೊಂಡ ವ್ಯಕ್ತಿಗೆ ಏನಾದರೂ ಅಪಘಾತವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ರೆ ಒಳರೋಗಿ (Inpatient Department) ಎಂದು ಗುರುತಿಸಿ ಆ ವ್ಯಕ್ತಿಗೆ ರೂ. 60,000 ಅಥವಾ ಕ್ಲೈಮ್ ಮಾಡಿದ ಮೊತ್ತದಲ್ಲಿ ಯಾವುದು ಕಡಿಮೆ ಇರುತ್ತೋ ಆ ಮೊತ್ತವನ್ನು ನೀಡಲಾಗುತ್ತೆ. ಅಲ್ಲದೆ ಹೊರರೋಗಿಯಾಗಿದ್ದರೆ (OutPatient Department) ರೂ. 30,000 ಅಥವಾ ಕ್ಲೈಮ್ (Claim) ಮಾಡಿದ ಮೊತ್ತದಲ್ಲಿ ಯಾವುದು ಕಡಿಮೆ ಇರುತ್ತೋ ಅದನ್ನು ಪಾಲಿಸಿದಾರರಿಗೆ ಪಾವತಿಸಲಾಗುತ್ತೆ

  • ಈ ಪಾಲಿಸಿಯಲ್ಲಿ ವಿದ್ಯಾ ಪ್ರಯೋಜನ ಅಂದರೆ ವಿದ್ಯಾಭ್ಯಾಸಕ್ಕಾಗಿ ಇಬ್ಬರು ಮಕ್ಕಳ ಪೀಜ್ ಗೆ 10 ರಷ್ಟು ಅಥವಾ 1 ಲಕ್ಷದ ತನಕ ಪಡೆಯಬಹುದು
  • ಆಸ್ಪತ್ತೆಯಲ್ಲಿ ಚಿಕಿತ್ಸೆ ಖರ್ಚಿಗಾಗಿ ದಿನಕ್ಕೆ ರೂ 1000 ರೂಪಾಯಿಯಂತೆ 10 ದಿನಗಳ ಕಾಲ ಪಡೆಯಬಹುದು
  • ಈ ಪಾಲಿಸಿ ತೆಗೆದುಕೊಂಡ ವ್ಯಕ್ತಿಯ ಕುಟುಂಬ ಪ್ರಯೋಜನದ ಅಡಿಯಲ್ಲಿ ಸಾರಿಗೆ ವೆಚ್ಚಕ್ಕಾಗಿ ರೂ. 25,000 ಪಡೆಯಬಹುದು
  • ಒಂದುವೇಳೆ ಪಾಲಿಸಿದಾರ ಮರಣದ ಸಂದರ್ಭದಲ್ಲಿ ಅಂತ್ಯಕ್ರಿಯೆಗಾಗಿ ರೂ. 5000 ಪಡೆಯಬಹುದು

ಇದನ್ನು ಓದಿ: ಪೋಸ್ಟ್ ಆಫೀಸಿನ ಈ ಸ್ಕೀಮ್ ನಲ್ಲಿ 1 ಲಕ್ಷ ಹೂಡಿಕೆ ಮಾಡಿ ಕೈತುಂಬ ಆದಾಯಗಳಿಸಿ

ರೂ. 299 ಪಾಲಿಸಿಯೊಂದಿಗೆ ಸಿಗುವ ಪ್ರಯೋಜನಗಳು ಹೀಗಿವೆ

ಅಂಚೆ ಇಲಾಖೆಯು ರೂ. 299 ಪ್ರೀಮಿಯಂನಲ್ಲಿ ಅಪಘಾತ ರಕ್ಷಣೆ ಯೋಜನೆಯನ್ನು ಸಹ ನೀಡುತ್ತಿದೆ. ಪಾಲಿಸಿದಾರರು ವರ್ಷಕ್ಕೆ ರೂ. 299 ಪಾವತಿಸುವ ಮೂಲಕ ರೂ 10 ಲಕ್ಷ ಅಪಘಾತ ವಿಮೆಯನ್ನು ಪಡೆಯಬಹುದು.

ರಸ್ತೆ ಅಪಘಾತದ ಸಾವು (Road Accident Death), ಅಂಗವೈಕಲ್ಯ, ಪಾರ್ಶ್ವವಾಯು ಮತ್ತು ವೈದ್ಯಕೀಯ ಚಿಕಿತ್ಸೆ ವೆಚ್ಚಗಳಂತಹ ಪ್ರಯೋಜನಗಳನ್ನು ಪಡೆಯಲು ರೂ. 399 ಪ್ರೀಮಿಯಂ ಪಾಲಿಸಿಯನ್ನು ತೆಗೆದುಕೊಳ್ಳಬೇಕಾಗುತ್ತೆ. ರೂ. 299 ಪ್ರೀಮಿಯಂ ಪಾಲಿಸಿ ತೆಗೆದುಕೊಂಡರೆ ಮೇಲೆ ತಿಳಿಸಿರುವ ಪ್ರಯೋಜನಗಳು ಲಭಿಸುವುದಿಲ್ಲ. ಪಾಲಿಸಿ ತೆಗೆದುಕೊಂಡವರು ಅಪಘಾತದಲ್ಲಿ ಮರಣ ಹೊಂದಿದರೆ 10 ಲಕ್ಷ ವಿಮೆ ಲಭಿಸುತ್ತೆ

Leave A Reply

Your email address will not be published.