Ultimate magazine theme for WordPress.

Samsung Mobile Users: ಸ್ಯಾಮ್ಸಂಗ್ ಫೋನ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ, ಕೂಡಲೇ ಈ ಕೆಲಸವನ್ನು ಮಾಡುವಂತೆ ಸೂಚನೆ

Security Alert for Samsung Mobile Users: ಸರ್ಕಾರ ಇದೀಗ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಕೆ ಕೊಟ್ಟಿದೆ. 

0

Security Alert for Samsung Mobile Users: ಪ್ರಸ್ತುತ ನಾವು ಸ್ಮಾರ್ಟ್ ಫೋನ್ ಯುಗದಲ್ಲಿ (Smart Phone Era) ಇದ್ದೇವೆ. ಇಲ್ಲಿ ಅದೆಷ್ಟೋ ರೀತಿಯ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದ ಸ್ಮಾರ್ಟ್ ಫೋನ್ ಗಳು (Advanced Desing And Technology) ಸಿಗುತ್ತವೆ.

ಪ್ರತಿದಿನ ನವನವೀನ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಇಂದು ನಾವು ನಮ್ಮ ಬಹುತೇಕ ಕೆಲಸಗಳಿಗೆ ಸ್ಮಾರ್ಟ್ ಫೋನ್ ಮೇಲೆ ಅವಲಂಭಿತವಾಗಿದ್ದೇವೆ ಆದರೆ ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮಾತ್ರ ಆಗಾಗ ಸುದ್ದಿಯಾಗುತ್ತಿರುತ್ತದೆ. ಇದಕ್ಕೆ ಸಾಕ್ಷಿಯೆಂಬುವಂತೆ ಸರ್ಕಾರ ಇದೀಗ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಕೆ ಕೊಟ್ಟಿದೆ.

ಸ್ಯಾಮ್ಸಂಗ್ ಫೋನ್ ಗಳಲ್ಲಿ ಸೆಕ್ಯುರಿಟಿ ದೋಷ

ಸ್ಯಾಮ್ಸಂಗ್ ಫೋನಿನಲ್ಲಿ ಸೆಕ್ಯುರಿಟಿ ದೋಷ (Security Error) ಕಂಡುಬಂದಿದೆ ಎಂದು ತಿಳಿಸಿದೆ.  ಎಲ್ಲಾ ಸ್ಯಾಮ್ಸಂಗ್ ಗ್ಯಾಲಕ್ಸಿ (Samsung Galaxy) ಫೋನ್ ಬಳಕೆದಾರರು ಸೈಬರ್ ದಾಳಿ ಮತ್ತು ಹ್ಯಾಕಿಂಗ್ ನಿಂದ (Cyber Attack and Hacking) ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಬೇಗ ತಮ್ಮ ಫೋನ್ ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಆದೇಶ ನೀಡಿದೆ.

ಇದನ್ನು ಓದಿ: Aadhaar News: ಆಧಾರ್ ವಿಷಯದಲ್ಲಿ ಸರ್ಕಾರ ಸೀರಿಯಸ್ ವಾರ್ನಿಂಗ್, ಇಂತಹ ಕೆಲಸ ಮಾಡಿದರೆ 50 ಸಾವಿರ ಫೈನ್

ಕೇಂದ್ರ ಸರ್ಕಾರದ ಸೈಬರ್ ಸೆಕ್ಯುರಿಟಿ ಏಜೆನ್ಸಿ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT- Computer Emergency Response Team) ಸ್ಯಾಮ್ಸಂಗ್ ಗೆಲಾಕ್ಸಿ ಫೋನ್ ಸೇರಿದಂತೆ ಹಳೆಯ ಫೋನಿನಲ್ಲಿ ಅನೇಕ ದೋಷಗಳಿವೆ ಎಂದು ಗುರುತಿಸಿದೆ. ಸೈಬರ್ ವಂಚಕರು ಲಕ್ಷಾಂತರ ಮಂದಿಯ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನಿನಿಂದ ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯುವ (Stealing Personal Data) ಸಾಧ್ಯತೆ ಇದೆ ಎಂದು ತಿಳಿಸಿದೆ

samsung galaxy s22 ultra available on amazon with a discount of upto rs 60000
image source : toms Guide

ಸ್ಯಾಮ್ಸಂಗ್ ಫೋನ್ ಬಳಕೆದಾರರು ಹೀಗೆ ಮಾಡಿ

ಈಗಾಗಲೇ ಸ್ಮಾಮ್ಸಂಗ್ ಫೋನಿನಲ್ಲಿ ದೋಷಗಳು ಇರುವುದು ಗೊತ್ತಾಗಿದೆ. ಈ ದೋಷಗಳಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಇರುವುದರಿಂದ ಸ್ಯಾಮ್ಸಂಗ್ ಫೋನ್ ಬಳಕೆದಾರರು ಆಂಡ್ರಾಯ್ಡ್ ವರ್ಷನ್ 11, 12, 13, 14 ಇರುವ ಆಪರೇಟಿಗ್ ಸಿಸ್ಟಮ್ (Operating System) ಅಪ್ಡೇಟ್ ಮಾಡಿಕೊಳ್ಳಬೇಕು

ಇದನ್ನು ಓದಿ: Cheque Transactions Rules : ನೀವು ಚೆಕ್ ಬರೆಯುವಾಗ ಈ ಸಣ್ಣ ಸಣ್ಣ ತಪ್ಪುಗಳನ್ನು ಮಾಡದಿರಿ, ತಪ್ಪಿದರೆ ಬೀಳುತ್ತೆ ದಂಡ

ನಿಮ್ಮ ಫೋನಿನ ನಿಯಂತ್ರಣ ವಂಚಕ ಪಾಲಾಗಬಹುದು 

ಭಾರತದಲ್ಲಿ ಈ ವರ್ಷ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಕಂಪನಿಗೆ ಸೇರಿದ ಫ್ಲಾಗ್ ಶಿಪ್ ಫೋನ್ ”ಸ್ಯಾಮ್ಸಂಗ್ ಗೆಲಾಕ್ಸಿ ಎಸ್ 23 ಸೇರಿದಂತೆ ಎಲ್ಲಾ ಗ್ಯಾಲಕ್ಸಿ ಫೋನ್ ಗಳಲ್ಲಿ ಹ್ಯಾಕರ್ಗಳು ಡೇಟಾವನ್ನು ಸಂಗ್ರಹಿಸುವ ಸಾಧ್ಯತೆ ಇದೆ.

ಫೋನ್ ಬಳಕೆದಾರರು ನಿರ್ಲಕ್ಷ್ಯ ಮಾಡಿದರೆ ಸೈಬರ್ ವಂಚಕರು ಮೊಬೈಲ್ ಸಿಮ್ ಪಿನ್ ನ ಸ್ರೀಕ್ರೆಟ್ ಕೋಡ್ ಅನ್ನು ಕದಿಯಬಹುದು. ಎಆರ್ ಖಾಸಗಿ ಇಮೋಜಿ ಫೈಲ್ ವೀಕ್ಷಿಸಬಹುದು. ಫೋನಿನ ಒಳಗೆ ಇರುವ ಫೈಲ್ ಗಳನ್ನು ಕದಿಯಬಹುದು. ಮಹತ್ವದ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಯನ್ನು ಕದಿಯಬಹುದು. ಅಲ್ಲದೆ ನಿಮ್ಮ ಫೋನ್ ನಿಮ್ಮ ವಂಚಕರ ನಿಯಂತ್ರಣಕ್ಕೆ ಒಳಪಡಬಹುದು ಎಂದು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ತಿಳಿಸಿದೆ.

ಹೀಗಾಗಿ ಸ್ಯಾಮ್ಸಂಗ್ ಫೋನ್ ಬಳಕೆದಾರರು ತಮ್ಮ ಪೋನಿನ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. ಹಾಗು ಯಾವುದೇ ಅನಧಿಕೃತ ಮೆಸೇಜ್ ಮತ್ತು ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ.

 

Leave A Reply

Your email address will not be published.