Ultimate magazine theme for WordPress.

Aadhaar News: ಆಧಾರ್ ವಿಷಯದಲ್ಲಿ ಸರ್ಕಾರ ಸೀರಿಯಸ್ ವಾರ್ನಿಂಗ್, ಇಂತಹ ಕೆಲಸ ಮಾಡಿದರೆ 50 ಸಾವಿರ ಫೈನ್

Aadhaar News: ಬೆರಳಚ್ಚು ( Biometric), ಕಣ್ಣಿನ ಸ್ಕ್ಯಾನ್ (Iris) ಮಾಡುವಾಗ ಮತ್ತು ಆಧಾರ್ ವಿವರಗಳನ್ನು (Demographic) ಸರಿಪಡಿಸಲು ಯಾವುದೇ ಆಪರೇಟರ್ ಆದರೂ ಸರಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಎಂದು ಸೀರಿಯಸ್ ವಾರ್ನಿಂಗ್ ಮಾಡಿದೆ.

2

Aadhaar News: ಇಂದಿನ ದಿನಮಾನಗಳಲ್ಲಿ ಆಧಾರ್ ಕಾರ್ಡ್ (Aadhaar Card) ನಮಗೆಲ್ಲಾ ತುಂಬ ಮುಖ್ಯವಾದ ದಾಖಲೆಯಾಗಿ ಮಾರ್ಪಟ್ಟಿದೆ.ಈಗ ಪ್ರತಿಯೊಂದು ಕೆಲಸಗಳಿಗೂ ಆಧಾರ್ ಕಾರ್ಡ್ ನ್ನು ಪುರಾವೆಯಾಗಿ ಕೇಳಲಾಗುತ್ತಿದೆ.

ಶಾಲೆಗೆ ಸೇರುವುದರಿಂದ ಹಿಡಿದು ಕೆಲಸಕ್ಕೆ ಸೇರುವವರೆಗೂ, ಬ್ಯಾಂಕ್ ಖಾತೆ ತೆರೆಯುವುದರಿಂದ (Opening a Bank Account) ಹಿಡಿದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರೆಗೆ (Investing in Stock market) ಪ್ರತಿಯೊಂದು ಕೆಲಸಕ್ಕೂ ಆಧಾರ್ ಅನಿರ್ವಾಯವಾಗಿದೆ.

ಆದರೆ ಆಧಾರ್ ವಿವರಗಳು ತಪ್ಪಾಗಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಹ ಸಿಗದೆ ಹೋಗುತ್ತವೆ. ಪಿಂಚಣಿ ದೊರೆಯುವುದಿಲ್ಲ ಅಲ್ಲದೆ ಸರ್ಕಾರದಿಂದ ಸಿಗುವ ಸಹಾಯಧನದಂತಹ ಸವಲತ್ತುಗಳನ್ನು ತಿರಸ್ಕರಿಸಲಾಗುತ್ತೆ. ಸಾಮಾನ್ಯವಾಗಿ ಆಧಾರ್ ಕಾರ್ಡಿನಲ್ಲಿ ಫೋನ್ ನಂಬರ್ (Phone Number), ವಿಳಾಸ, (Address) ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ (Spelling Mistake in Name), ಹುಟ್ಟಿದದಿನಾಂಕ ತಪ್ಪಾಗಿ ಮುದ್ರಣವಾಗಿರುತ್ತೆ. ಇವುಗಳನ್ನು ಸರಿಪಡಿಸಿಕೊಳ್ಳಲು ಯುಡಿಎಐ ಪೋರ್ಟಲ್ ನಲ್ಲಿ ಅಥವಾ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಕೊಳ್ಳಬಹುದು.

ಆಧಾರ್ ಕೇಂದಕ್ಕೆ ಹೋಗಿ ಆಧಾರ್ ವಿವರಗಳನ್ನು ಸರಿಪಡಿಕೊಳ್ಳಲು 25 ರೂಪಾಯಿ ಕಟ್ಟಬೇಕಾಗುತ್ತದೆ. ಆದರೆ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಲು ಕೆಲ ಆಧಾರ್ ಸೆಂಟರ್ ಆಪರೇಟರ್ ಗಳು 100 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ರೂ. 150 ರಿಂದ ರೂ.200 ವರೆಗೂ ವಸೂಲಿ ಮಾಡುತ್ತಿರುವುದಾಗಿ ಕೇಂದ್ರಕ್ಕೆ ದೂರುಗಳು ಬಂದಿವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸದ್ಯ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Session of Parliment) ಈ ವಿಷಯ ಚರ್ಚಗೆ ಬಂದಿದೆ.

ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಗೊತ್ತೆ? ಹೀಗೆ ಚೆಕ್ ಮಾಡಿ

ಕೇಂದ್ರ ಸರ್ಕಾರದಿಂದ ಸೀರಿಯಸ್ ವಾರ್ನಿಂಗ್ 

ಬೆರಳಚ್ಚು ( Biometric), ಕಣ್ಣಿನ ಸ್ಕ್ಯಾನ್ (Iris) ಮಾಡುವಾಗ ಮತ್ತು ಆಧಾರ್ ವಿವರಗಳನ್ನು (Demographic) ಸರಿಪಡಿಸಲು ಯಾವುದೇ ಆಪರೇಟರ್ ಆದರೂ ಸರಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಎಂದು ಸೀರಿಯಸ್ ವಾರ್ನಿಂಗ್ ಮಾಡಿದೆ. ಒಂದು ವೇಳೆ ಹೀಗೆ ಮಾಡಿದರೆ ಅಂತಹ ಆಪರೇಟರ್ ಅನ್ನು ಸಸ್ಪೆಂಡ್ ಮಾಡಲಾಗುವುದು ಮತ್ತು ಅವರನ್ನು ನೇಮಿಸಿಕೊಂಡಿರುವ ರಿಜಿಸ್ಟ್ರಾರ್ ಗೆ 50 ಸಾವಿರ ದಂಡ ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಬಯೋಮೆಟ್ರಿಕ್ ಮತ್ತು ಡೆಮೊಗ್ರಾಫಿಕ್ ವಿವರಗಳ ಅಪ್ಡೇಟ್ ಸೇರಿದಂತೆ ಆಧಾರ್ ಸೇವೆಗಳಿಗಾಗಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ಶುಲ್ಕ ವಿಧಿಸದಂತೆ ಎಲ್ಲಾ ಅಧಾರ್ ಆಪರೇಟರ್ ಗಳಿಗೆ ನಿರ್ದೇಶ ನೀಡಿದೆ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಯಾರದರೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಶುಲ್ಕ ವಿಧಿಸಿದರೆ ಟೋಲ್ ಫ್ರೀ ಸಂಖ್ಯೆ  1947ಗೆ ಕರೆ ಮಾಡಿ ದೂರು ನೀಡಬಹುದು.

ಇದನ್ನು ಓದಿ: Voter ID Linking: ವೋಟರ್ ಐಡಿ ಜೊತೆ ಆಧಾರ್ ಲಿಂಕ್ ಮಾಡುವ ಕುರಿತು ಕೇಂದ್ರ ಸ್ಪಷ್ಟನೆ, ನೀವು ಈ ಕೆಲಸ ಮಾಡಬೇಕಾಗುತ್ತೆ

uidai once again extended the deadline for free updation of Aadhaar details
Representative Image

ಆಧಾರ್ ಉಚಿತ ಅಪ್ಡೇಟ್ ಗಡುವು ವಿಸ್ತರಣೆ  

ಆಧಾರ್ ವಿವರಗಳನ್ನು ತಪ್ಪಾಗಿದ್ದರೆ ಅವುಗಳನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ನಿಗದಿ ಪಡಿಸಿದ್ದ ಗಡುವನ್ನು ಭಾರತ ವಿಶಿಷ್ಠ ಗುರುತಿನ ಪ್ರಾಧಿಕಾರ ಸಂಸ್ಥೆ ಮತ್ತೆ ವಿಸ್ತರಿಸಿದೆ.  ಆನ್ಲೈನ್ ಮೂಲಕ ಆಧಾರ್ ವಿವರಗಳನ್ನು ಉಚಿತವಾಗಿ ಸರಿಪಡಿಸಿಕೊಳ್ಳಲು ಡಿಸೆಂಬರ್ 14, 2023 ರ ತನಕ ಕಾಲಾವಕಾಶ ಕೊಟ್ಟಿತ್ತು. ಇದೀಗ ಮತ್ತೆ ಮೂರು ತಿಂಗಳು ಗಡುವನ್ನು ವಿಸ್ತರಿಸಿದೆ. ಆಧಾರ್ ಅಪ್ಡೇಟ್ ಮಾಡಿಕೊಳ್ಳುವವರಿಗೆ 14 ಮಾರ್ಚ್ 2024 ರ ತನಕ ಕಾಲಾವಕಾಶವನ್ನು ನೀಡಿದೆ.

ನಿಮ್ಮ ಆಧಾರ್ ನಲ್ಲಿ ತಪ್ಪುಗಳಿದ್ದರೆ ಅಥವಾ ನೀವು ಆಧಾರ್ ಪಡೆದು 10 ವರ್ಷಗಳಾಗಿದ್ದರೆ ಅದನ್ನು ನವೀಕರಿಸುವುದು ನಾಗರಿಕರ ಜವಾಬ್ದಾರಿಯಾಗಿದೆ ಹೀಗಾಗಿ https://myaadhaar uidai.gov.in ಮೂಲಕ ಉಚಿತ ನವೀಕರಣ ಸೌಲಭ್ಯವನ್ನು ಪಡೆಯಬಹುದು.

Leave A Reply

Your email address will not be published.