Ultimate magazine theme for WordPress.

ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್, ಈ ಸೇವೆ ಇನ್ಮುಂದೆ ಸಂಪೂರ್ಣ ಉಚಿತ

ಏರ್ಟೆಲ್ ಸ್ಪ್ಯಾಮ್ ಡಿಟೆಕ್ಷನ್ ಸೆಲ್ಯೂಷನ್ ಡ್ಯುಯಲ್ ಲೇಯರ್ ರಕ್ಷಣೆಯನ್ನು ಹೊಂದಿದ್ದು ಎರಡು ಹಂತಗಳಲ್ಲಿ ಫಿಲ್ಟರ್ ಆಗುತ್ತದೆ ಎಂದು ಬಹಿರಂಗಪಡಿಸಿದರು

1

ಟೆಲಿಕಾಂ ವಲಯದ ದಿಗ್ಗಜ ಕಂಪನಿಗಳ ಪೈಕಿ ಏರ್ಟೆಲ್ ಕಂಪನಿಯು ಇಂದು ಹೊಸ ಮುನ್ನಡಿಯೊಂದನ್ನು ಬರೆದಿದೆ. ಹೌದು ಬಳಕೆದಾರರಿಗೆ ಪ್ರಸ್ತುತ ಕಿರಿಕಿರಿ ಉಂಟು ಮಾಡುತ್ತಿರುವ ಸ್ಪ್ಯಾಮ್ ಕಾಲ್ಸ್, ಮೇಸೇಜ್ ಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ಇದಕ್ಕಾಗಿ ಕಂಪನಿಯು ಆರ್ಟಿಫಿಶಿಯಲ್ ತಂತ್ರಜ್ಞಾನದ ಸಹಾಯದೊಂದಿಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸ್ಪ್ಯಾಮ್ ಕಾಲ್ಸ್ ಮತ್ತು ಸ್ಪ್ಯಾಮ್ ಮೇಸೇಜ್ ಗಳನ್ನು ನಿಯಂತ್ರಿಸುವ ಸಲುವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸ್ಪ್ಯಾಮ್ ಡಿಟೆಕ್ಷನ್ ವಿಧಾನವನ್ನು (Airtel AI Based Network Solution for SPAM Detection) ಏರ್ಟೆಲ್ ಇಂದು ಪರಿಚಯಿಸಿದೆ. ಕಂಪನಿ ಪರಿಚಯಿಸಿರುವ ಈ ಹೊಸ ವಿಧಾನ ಬಳಕೆದಾರರಿಗೆ ಸ್ಪ್ಯಾಮ್ ಕಾಲ್ಸ್ ಮತ್ತು ಸ್ಪ್ಯಾಮ್ ಮೇಸೇಜ್ ಗಳ ಕುರಿತು ಎಚ್ಚರಿಕೆ ನೀಡುತ್ತದೆ. ಅಂದಹಾಗೆ ಈ ಹೊಸ ಸೇವೆಯನ್ನು ಪಡೆಯಲು ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಇದು ಸಂಪೂರ್ಣವಾಗಿ ಉಚಿತ ಸೇವೆಯಾಗಿದೆ.

kannadatips default image
image source: original source

ಸೆಪ್ಟೆಂಬರ್ 26 ರಿಂದ ಲಭ್ಯವಿರುತ್ತೆ ಈ ಸೇವೆ 

ಇನ್ನು ಏರ್ಟೆಲ್ ರೂಪಿಸಿರುವ ಈ ಹೊಸ ವಿಧಾನ ಸೆಪ್ಟೆಂಬರ್ 26 ರಿಂದಲೇ ಜಾರಿಗೆ ಬರುತ್ತದೆ ಎಂದು ಕಂಪನಿಯ ಸಿಇಒ, ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲ್ ಮಿತ್ತಲ್ ತಿಳಿಸಿದ್ದಾರೆ. ಅಲ್ಲದೆ ಸ್ಪ್ಯಾಮ್ ಕಾಲ್ಸ್ ಮತ್ತು ಸ್ಪ್ಯಾಮ್ ಮೇಸೇಜ್ ಗಳ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿರುವ ಮೊದಲ ಟೆಲಿಕಾಂ ಸಂಸ್ಥೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಶೇಕಡಾ 60 ರಷ್ಟು ಬಳಕೆದಾರರು ಪ್ರತಿ ದಿನ ಮೂರು ಸ್ಪ್ಯಾಮ್ ಕಾಲ್ಸ್ ಗಳನ್ನು ಸ್ಪೀಕರಿಸುತ್ತಾರೆ ಎಂದು ತಿಳಿಸಿದರು.

ಇನ್ನು ಏರ್ಟೆಲ್ ಸ್ಪ್ಯಾಮ್ ಡಿಟೆಕ್ಷನ್ ಸೆಲ್ಯೂಷನ್ ಡ್ಯುಯಲ್ ಲೇಯರ್ ರಕ್ಷಣೆಯನ್ನು ಹೊಂದಿದ್ದು ಎರಡು ಹಂತಗಳಲ್ಲಿ ಫಿಲ್ಟರ್ ಆಗುತ್ತದೆ ಎಂದು ಬಹಿರಂಗಪಡಿಸಿದರು. ಒಂದು ನೆಟ್ವರ್ಕ್ ಹಂತದಲ್ಲಿ ಮತ್ತೊಂದು ಐಟಿ ಸಿಸ್ಟಮ್ ಹಂತಗಳಲ್ಲಿ ಫಿಲ್ಟರ್ ಆಗುತ್ತದೆ ಮತ್ತು ಪ್ರತಿ ಕಾಲ್ ಹಾಗೂ ಎಸ್ಎಂಎಸ್ ಈ ಡ್ಯುಯಲ್ ಲೇಯರ್ ಎಐ ಶೀಲ್ಡ್ ಅನ್ನು ದಾಟಿ ಹೋಗಬೇಕಾಗುತ್ತದೆ ಎಂದರು. ಕೇವಲ ಎರಡು ಮಿಲಿ ಸೆಕಂಡ್ ನಲ್ಲೇ ಈ ಪ್ರಕ್ರಿಯೆ ಪೂರ್ಣವಾಗುತ್ತದೆ ಎಂದು ತಿಳಿಸಿದರು, ಪ್ರತಿ ದಿನ 1.5 ಬಿಲಿಯನ್ ಎಸ್ಎಂಎಸ್ ಮತ್ತು 2.5 ಬಿಲಿಯನ್ ಕಾಲ್ಸ್ ಪ್ರೊಸೆಸ್ ಆಗುತ್ತದೆ ಎಂದು ವಿವರಿಸಿದರು.

 

ai based network solution
Representative Image

ಯಾವುದೇ ಆ್ಯಪ್ ಇನ್ ಸ್ಟಾಲ್ ಮಾಡುವ ಅಗತ್ಯವಿಲ್ಲ 

ಸ್ಪ್ಯಾಮ್ ಡಿಟೆಕ್ಷನ್ ವ್ಯವಸ್ಥೆಗಾಗಿ ಎರ್ಟೆಲ್ ಗ್ರಾಹಕರು ಯಾವುದೇ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡುವ ಮತ್ತು ಯಾವುದೇ ಮನವಿಗಳನ್ನು ಮಾಡುವ ಅಗತ್ಯವಿಲ್ಲ ಎಂದು ಕಂಪನಿಯು ತಿಳಿಸಿದೆ. ಕಂಪನಿಯ ಈ ಹೊಸ ವ್ಯವಸ್ಥೆ ಸಂಪೂರ್ಣವಾಗಿ ಉಚಿತ ಮತ್ತು ಆಟೋಮೆಟಿಕ್ ಆಗಿ ಆಕ್ಟಿವೇಟ್ ಆಗುತ್ತದೆ ಎಂದು ಏರ್ಟೆಲ್ ಕಂಪನಿಯು ತಿಳಿಸಿದೆ. ಇನ್ನು ಈ ಎಐ ಆಧಾರಿತ ಸ್ಪ್ಯಾಮ್ ಡಿಟೆಕ್ಷನ್ ಸೆಲ್ಯೂಷನ್ ಜಾರಿಗೆ ತರಲು ಕಳೆದ 12 ತಿಂಗಳಿನಿಂದ ಕೆಲಸ ಮಾಡಿದ್ದಾಗಿ ಸಿಇಒ ತಿಳಿಸಿದ್ದಾರೆ ಜೊತೆಗೆ ಭಾರತ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸ್ಪ್ಯಾಮ್ ಫ್ರೀ ನೆಟ್ ವರ್ಕ್ ಆಗಿ ಏರ್ಟೆಲ್ ಗುರುತಿಸಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

Leave A Reply

Your email address will not be published.