Ultimate magazine theme for WordPress.

108MP ಕ್ಯಾಮೆರಾ, 512GB ಸ್ಟೋರೇಜ್ ಹೊಂದಿರುವ ಹಾನರ್ ಸ್ಮಾರ್ಟ್ ಫೋನ್ ಲಾಂಚ್, ಸೇಲ್ ಯಾವಾಗ ಅಂದ್ರೆ

ಈ ಹಾನರ್ ಸ್ಮಾರ್ಟ್ ಫೋನ್ 80W ವೈರ್ಡ್ ಮತ್ತು 66W ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 5600mAh ಬ್ಯಾಟರಿಯನ್ನು ಹೊಂದಿದೆ. ವೈರ್ ಚಾರ್ಜರ್ 40 ನಿಮಿಷದಲ್ಲಿ 100 ರಷ್ಟು ಚಾರ್ಜಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

1

ಹಾನರ್ ಕಂಪನಿಯು ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವೇಗವಾಗಿ ವಿಸ್ತರಣೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾದ ಫೀಚರ್ ಗಳನ್ನು ಹೊಂದಿರುವ ”ಹಾನರ್ ಮ್ಯಾಜಿಕ್ 6 ಪ್ರೊ” ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಇಳಿಸಿದೆ.

ಈ ಸ್ಮಾರ್ಟ್ ಫೋನ್ Honor E1 ಚಿಪ್ಸೆಟ್ ಹೊಂದಿದೆ. ಇದು ಬ್ಯಾಟರಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೀರ್ಘ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

kannadatips default image
image source: original source

 

ಹಾನರ್ ಮ್ಯಾಜಿಕ್ 6 ಪ್ರೊ ಸ್ಪೆಸಿಫಿಕೇಶನ್ಸ್

ಈ ಸ್ಮಾರ್ಟ್ ಫೋನ್ 120Hz ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ರೇಟ್ ನೊಂದಿಗೆ 6.8 ಇಂಚಿನ OLED LTPO ಡಿಸ್ ಪ್ಲೇಯನ್ನು ಹೊಂದಿದೆ. ಈ ಸ್ಕ್ರೀನ್ 5000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ನೀಡುತ್ತದೆ ಮತ್ತು ಡಾಲ್ಬಿ ವಿಷನ್ ಸಪೋರ್ಟ್ ಮಾಡುತ್ತದೆ. ಅಲ್ಲದೆ ನ್ಯಾನೊ ಕ್ರಿಸ್ಟಲ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ. ಇದು 10 ಪಟ್ಟು ಹೆಚ್ಚು ಡ್ರಾಪ್ ರೆಸಿಸ್ಟೆಂಟ್ ಆಗಿದೆ ಅಲ್ಲದೆ ಸ್ವಿಸ್ SGS ಮಲ್ಟಿ ಸೀನ್ ಗೋಲ್ಡ್ ಲೇಬಲ್ ಪಡೆದ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ.

ಈ ಹಾನರ್ ಸ್ಮಾರ್ಟ್ ಫೋನ್ 80W ವೈರ್ಡ್ ಮತ್ತು 66W ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 5600mAh ಬ್ಯಾಟರಿಯನ್ನು ಹೊಂದಿದೆ. ವೈರ್ ಚಾರ್ಜರ್ 40 ನಿಮಿಷದಲ್ಲಿ 100 ರಷ್ಟು ಚಾರ್ಜಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಇದು 2 ಜೆನ್ ಸಿಲಿಕಾನ್ ಕಾರ್ಬನ್ ಬ್ಯಾಟರಿಯ ಜೊತೆಗೆ  ಹಾನರ್ E1 ಚಿಪ್ಸೆಟ್ ಅನ್ನು ಹೊಂದಿದೆ. ಇದು ಬ್ಯಾಟರಿಯ ಪವರ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಫೋನ್ ಕೇವಲ 10 ರಷ್ಟು ಬ್ಯಾಟರಿ ಇರುವ ಸಮಯದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಪೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನು ಓದಿ: ಒನ್ ಪ್ಲಸ್ ನಾರ್ಡ್ 4 ಫೋನಿನ ಮೊದಲ ಸೇಲ್ ಆರಂಭ, ಈ ಕ್ರೆಡಿಟ್ ಕಾರ್ಡ್ ಗಳ ಮೇಲೆ ಡಿಸ್ಕೌಂಟ್

ಈ ಹ್ಯಾಂಡ್ ಸೆಟ್ ಕ್ವಾಲ್ಕಮ್ ನ ಸ್ನಾಪ್ ಡ್ರ್ಯಾಗನ್ 8 Gen 3 ಚಿಪ್ಸೆಟ್ ಹೊಂದಿದೆ. ಗ್ರಾಫಿಕ್ಸ್ ಟಾಸ್ಕ್ ಗಳಿಗಾಗಿ Adreno 750 GPU ನೊಂದಿಗೆ ಬರುತ್ತದೆ. ಇದು ವೇಗವಾಗಿ ಕಾರ್ಯನಿರ್ವಹಿಸಲು LPDDR5X RAM ಮತ್ತು UFS 4.o ತಂತ್ರಜ್ಞಾನವನ್ನು ಬಳಸುತ್ತದೆ.  ಆಂಡ್ರಾಯ್ಡ್ 14 ಆಧಾರಿತ Magic UI 8.o ಮೂಲಕ ಕೆಲಸ ಮಾಡುತ್ತದೆ.

50MP+180MP+50MP ಕ್ಯಾಮೆರಾ

ಹಾನರ್ ಮ್ಯಾಜಿಕ್ 6 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಯುನಿಟ್ ಅನ್ನು ಹೊಂದಿದೆ.f/1.4- f/2.0 ಅಪರ್ಚರ್ ನೊಂದಿಗೆ 50MP ಪ್ರಧಾನ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 180MP ಪೆರಿಸ್ಕೊಪ್ ಟೆಲಿಫೋಟೋ ಸೆನ್ಸರ್ ಅನ್ನು ಹೊಂದಿದೆ. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಮ್ಯಾಜಿಕ್ 6 ಪ್ರೊ Wi-Fi 7, ಬ್ಲೂಟೂತ್ 5.3, NFC, ಡ್ಯುಯಲ್ ಸ್ಟಿರಿಯೋ ಸ್ಪೀಕರ್ ಸೆಟಪ್ ಮತ್ತು IP68 ರೇಟಿಂಗ್ ನೊಂದಿಗೆ ಬರುತ್ತದೆ.

Honor Magic 6 pro
Representative Image

ಹಾನರ್ ಮ್ಯಾಜಿಕ್ 6 ಪ್ರೊ ಬೆಲೆ ಮತ್ತು ಸೇಲ್

ಕಂಪನಿಯು ಈ ಸ್ಮಾರ್ಟ್ ಫೋನ್ ಅನ್ನು ಕೇವಲ ಒಂದು ವೇರಿಯೆಂಟ್ ನಲ್ಲಿ ಮಾತ್ರ ಬಿಡುಗಡೆ ಮಾಡಿದೆ. 12GB/512GB ಸ್ಟೋರೇಜ್ ರೂಪಾಂತರವು ರೂ. 89,999 ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ. ಈ ಸ್ಮಾರ್ಟ್ ಫೋನ್ ಆಗಸ್ಟ್ 15 ರಿಂದ ಸೇಲ್ ಆಗಲಿದೆ. ಖರೀದಿಸಲು ಇಚ್ಚಿಸುವ ಗ್ರಾಹಕರು ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಈ ಹ್ಯಾಂಡ್ ಸೆಟ್ ಬ್ಲ್ಯಾಕ್ ಮತ್ತು Epi ಗ್ರೀನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಇದನ್ನು ಓದಿ: 50 + 50MP ಕ್ಯಾಮೆರಾ, 256GB ಸ್ಟೋರೇಜ್ ಸಾಮರ್ಥ್ಯದ ಫೋನ್ ಬಿಡುಗಡೆ, ಬೆಲೆ ಮತ್ತು ಸೆಲ್ ವಿವರ ತಿಳಿಯಿರಿ

Leave A Reply

Your email address will not be published.