Ultimate magazine theme for WordPress.

CVV, CVC ನಂಬರ್ ಬಗ್ಗೆ ನಿಮಗೆಷ್ಟು ಗೊತ್ತು, ಇವನ್ನು ಯಾವ ಕಾರಣಕ್ಕಾಗಿ ಉಪಯೋಗಿಸುತ್ತಾರೆ ತಿಳಿಯಿರಿ

CVV And CVC Numbers: ಅಪರಿಚಿತ ವ್ಯಕ್ತಿಗಳಿಂದ ನಿಮ್ಮ ಕಾರ್ಡ್ ದುರ್ಬಳಕೆಯಾಗದಂತೆ ತಡೆಯುವ ಒಂದು ವಿಧಾನವಾಗಿದೆ

0

CVV And CVC Numbers: ಸಾಮಾನ್ಯವಾಗಿ ಸ್ನೇಹಿತರು, ಕುಟುಂಬ ಸದಸ್ಯರ ನಡುವೆ ಸೀಕ್ರೆಟ್ಗೆ (Secret) ಜಾಗ ಇಲ್ಲ ಅಂತಾರೆ ಆದರೆ ಇದು ನಿಮ್ಮ ಕ್ರೆಡಿಟ್/ ಡೆಬಿಟ್ ಕಾರ್ಡುಗಳಿಗೆ (Credit/Debit Cards) ಅಪ್ಲೈ ಆಗೋಲ್ಲ. ಏಕೆಂದರೆ ಇದು ನಿಮ್ಮ ಹಣಕಾಸಿನ ವಿಚಾರವಾಗಿರುವುದರಿಂದ ಸ್ವಲ್ಪನಾದ್ರೂ ಸೀಕ್ರೆಟ್ ಮೇಂಟೈನ್ ಮಾಡಬೇಕಾಗುತ್ತೆ.

ಸಾಮಾನ್ಯವಾಗಿ ಆನ್ಲೈನ್ ಅಥವಾ ಫೋನ್ ಮೂಲಕ ನಾವು ಏನಾದರೂ ವಸ್ತುಗಳನ್ನು ಖರೀದಿಸಿದಾಗ (Purchasing Items) ಸೆಲ್ಲರ್ಸ್ (Sellers) ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ನಂಬರ್, ಕಾರ್ಡ್ ಎಕ್ಸ್ ಪೈರ್ ಡೇಟ್ (Expire Date) ಕೇಳುವುದನ್ನು ನಾವು ಗಮನಿಸಿರುತ್ತೇವೆ. ಅದರಲ್ಲೂ CVV ನಂಬರ್ ತಪ್ಪದೇ ಕೇಳುತ್ತಾರೆ.

ನೀವು ಈ ಎಲ್ಲಾ ವಿವರಗಳನ್ನು ಕೊಟ್ಟರೆ ಮಾತ್ರ ಟ್ರಾನ್ಸಾಕ್ಷನ್ (Transaction) ಪೂರ್ತಿಯಾಗುತ್ತದೆ. ನೀವು ಶಾಪಿಂಗ್ ಮಾಡುವ ಪ್ರತಿಬಾರಿ CVV ನಂಬರ್ ಎಂಟರ್ ಮಾಡಬೇಕಾಗುತ್ತೆ. ಇದು ಏಕೆ ಅಷ್ಟು ಮುಖ್ಯ..? ಇದರಿಂದಾಗುವ ಉಪಯೋಗವೇನು ಎಂಬುದನ್ನು ತಿಳಿಯೋಣ ಬನ್ನಿ

CVV ಎಂದರೇನು..?

ತುಂಬಾ ಸರಳವಾಗಿ ಹೇಳುವುದಾದರೆ ”ಸಿವಿವಿ ಎನ್ನುವುದು ಅಪರಿಚಿತ ವ್ಯಕ್ತಿಗಳಿಂದ ನಿಮ್ಮ ಕಾರ್ಡ್ ದುರ್ಬಳಕೆಯಾಗದಂತೆ ತಡೆಯುವ ಒಂದು ವಿಧಾನವಾಗಿದೆ. CVVಯ ವಿಸ್ತ್ತೃತ ರೂಪ ಕಾರ್ಡ್ ವೆರಿಫಿಕೇಶನ್ ಕೋಡ್ (Card Verification Value) CVV ನಂಬರ್ ಅನ್ನೋದು ಕ್ರೆಡಿಟ್, ಡೆಬಿಟ್ ಕಾರ್ಡಿನ ಹಿಂಭಾಗದಲ್ಲಿ ಮ್ಯಾಗ್ನೆಟಿಕ್ ಸ್ಟ್ರಿಪ್ ಹತ್ತಿರ ಇರುವ 3 ಅಂಕಿಗಳ ಸಂಖ್ಯೆಯಾಗಿದೆ.

ಅನೇಕ ಏಜೆನ್ಸಿಗಳು CVV ಸಂಖ್ಯೆಗಳಿಗೆ ವಿಭಿನ್ನ ಹೆಸರುಗಳನ್ನು ಕೊಟ್ಟಿವೆ. ಮಾಸ್ಟರ್ ಕಾರ್ಡಿನಲ್ಲಿ CVV ಕೋಡ್ CVC2 ಅಂತ ಇರುತ್ತೆ. VISA ಕಾರ್ಡ್ ನಲ್ಲಿ CVV2 ಅಂತ ಇರುತ್ತೆ.  ಅಮೆರಿಕನ್ ಎಕ್ಸ್ ಪ್ರೆಸ್ ಇದನ್ನು ಕಾರ್ಡ್ ಐಡೆಂಟಿಫಿಕೇಶನ್ ನಂಬರ್ ಅಂತ ಸೂಚಿಸುತ್ತೆ

ಇದನ್ನು ಓದಿ: Cheque Transactions Rules : ನೀವು ಚೆಕ್ ಬರೆಯುವಾಗ ಈ ಸಣ್ಣ ಸಣ್ಣ ತಪ್ಪುಗಳನ್ನು ಮಾಡದಿರಿ, ತಪ್ಪಿದರೆ ಬೀಳುತ್ತೆ ದಂಡ

kannadatips default image
image source: original source

CVV ಉದ್ದೇಶವೇನು..?

ಕಾರ್ಡ್ ಮಾಲೀಕರು ಮಾತ್ರ ಕಾರ್ಡ್ ಅನ್ನು ಬಳಸುತ್ತಿದ್ದಾರೆ ಎಂದು CVV ಖಚಿತಪಡಿಸುತ್ತದೆ. ಯಾರಿಗಾದರೂ ನಿಮ್ಮ ಕಾರ್ಡಿನ ಎಲ್ಲಾ ವಿವರಗಳು ಗೊತ್ತಿದ್ದರೂ CVV ಇಲ್ಲದೆ ಅವರು ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅಲ್ಲದೆ CVV ಕೋಡ್ ಕಳ್ಳತನ, ವಂಚನೆ, ಅನಧಿಕೃತ ವಹಿವಾಟುಗಳಿಂದ ರಕ್ಷಿಸುತ್ತದೆ.

ಇದನ್ನು ಓದಿ: ನೀವು ಬ್ಯಾಂಕಿನ ಚೆಕ್ ನಲ್ಲಿ Only ಎಂಬ ಪದ ಬರೆಯದಿದ್ದರೆ ಅದು ಬೌನ್ಸ್ ಆಗುತ್ತದೆಯೇ, ಇಂತಹ ತಪ್ಪುಗಳನ್ನು ಮಾಡಬೇಡಿ

ಶಾಪಿಂಗ್ ಮಾಡುವಾಗ ಎಚ್ಚರವಹಿಸಿ

ಆನ್ಲೈನ್ ಶಾಪಿಂಗ್ ಮಾಡುವಾಗ ನೀವು ಈ ಕೋಡನ್ನು ಎಂಟರ್ ಮಾಡಬೇಕು. CVV ನಂಬರ್ ಇಲ್ಲದೆ ಹ್ಯಾಕರ್ ಸಹ ಯಾವುದೇ ವಹಿವಾಟು ಮಾಡಲು ಆಗುವುದಿಲ್ಲ. ಇದಕ್ಕೂ ಮುಂಚೆ CVV ನಂಬರ್ ಮೂಲಕ ಮಾತ್ರವೇ ಪಾವತಿ ನಡೆಯುತ್ತಿತ್ತು ಆದರೆ ಈಗ ಕಾರ್ಡ್ ಭದ್ರತೆಯ ದೃಷ್ಠಿಯಿಂದ OTP, 3D ಸುರಕ್ಷಿತ ಪಿನ್ ಕಡ್ಡಾಯ ಮಾಡಲಾಗಿದೆ.  ಹೀಗಾಗಿ ನೀವು ಯಾವುದೇ ವೆಬ್ಸೈಟ್ ನಲ್ಲಿ ವ್ಯವಹಾರ ಮಾಡುವಾಗ CVV ಜೊತೆ OTP ದೃಢೀಕರಣ, 3D ಸುರಕ್ಷಿತ ಪಿನ್ ನಂಬರ್ ಎಂಟರ್ ಮಾಡಬೇಕಾಗುತ್ತೆ. ಆದಾಗ್ಯೂ ಅನೇಕ ವೆಬ್ಸೈಟ್ ಗಳು CVV ನಂಬರ್, OTP ಮೂಲಕ ಪಾವತಿ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ.

Leave A Reply

Your email address will not be published.