Ultimate magazine theme for WordPress.

5 ಲಕ್ಷದ ತನಕ ಉಚಿತ ಚಿಕಿತ್ಸೆ ಯೋಜನೆ, ಬಿಜೆಪಿಯ ಈ ಭರವಸೆ ಚಾಲ್ತಿಗೆ ಬಂದರೆ ಇಂತವರಿಗೂ ಅನುಕೂಲ

ಬಿಜೆಪಿಯು 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು '' ಮೋದಿ ಕಿ ಗ್ಯಾರಂಟಿ ಸಂಕಲ್ಪ ಪತ್ರ 2024'' ಪ್ರಣಾಳಿಕೆಯನ್ನು ಸೂಕ್ಷವಾಗಿ ರೂಪಿಸಿದೆ.

0

ದೇಶದಲ್ಲಿ 2024 ರ ಲೋಕಸಭಾ ಚುನಾವಣೆಯ (Loksabha Election 2024) ಬಿಸಿ ಏರ ತೊಡಗಿದೆ. ಇತ್ತ ಚುನಾವಣೆಯ ಅಖಾಡಕ್ಕೆ ಧುಮುಕಿರುವ ಅಭ್ಯರ್ಥಿಗಳು (Candidates) ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರಗಳನ್ನು ರೂಪಿಸುತ್ತಿರುವ ಬಿಜೆಪಿ ಪಕ್ಷ ” ಮೋದಿ ಕಿ ಗ್ಯಾರಂಟಿ ಸಂಕಲ್ಪ ಪತ್ರ 2024” (Modi Ki Guarantee Sankalpa Patra 2024) ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಬಿಜೆಪಿಯು ಈ ಮ್ಯಾನಿಫೆಸ್ಟೋದಲ್ಲಿ (Manifesto) ಹಲವು ಅಂಶಗಳನ್ನು ಮತ್ತು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ ಅವುಗಳ ಪೈಕಿ ”ಆಯುಷ್ಮಾನ್ ಭಾರತ್” (Ayushman Bharat) ಯೋಜನೆ ಕುರಿತು ಮೋದಿ ಮಾಡಿರುವ ಪ್ರಸ್ತಾಪ ಗಮನಸೆಳೆದಿದ್ದು ಸಂಚಲನಕ್ಕೆ ಕಾರಣವಾಗಿದೆ. ಹಾಗಿದ್ದರೆ ಬಿಜೆಪಿ ತನ್ನ ಮ್ಯಾನಿಫೆಸ್ಟೋದಲ್ಲಿ ಅಂತದ್ದು ಏನು ಹೇಳಿದೆ ಅನ್ನೋದನ್ನ ತಿಳಿಯೋಣ ಬನ್ನಿ

kannadatips default image
image source: original source

ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ಹಿರಿಯ ನಾಗರಿಕರು

ಬಿಜೆಪಿಯು 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ” ಮೋದಿ ಕಿ ಗ್ಯಾರಂಟಿ ಸಂಕಲ್ಪ ಪತ್ರ 2024” ಪ್ರಣಾಳಿಕೆಯನ್ನು ಸೂಕ್ಷವಾಗಿ ರೂಪಿಸಿದೆ. ಇದರಲ್ಲಿ ಬಡವರು, ರೈತರು, ಮಹಿಳೆಯರು ಮತ್ತು ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಅದರಲ್ಲಿ ಹಿರಿಯ ನಾಗರಿಕರಿಗೆ ಖುಷಿಯಾಗುವಂತಹ ಒಂದು ವಿಚಾರವನ್ನು ಮೋದಿ ಬಹಿರಂಗಪಡಿಸಿದ್ದಾರೆ ಅದೇನೆಂದರೆ ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ಹಿರಿಯ ನಾಗರಿಕರನ್ನು (Senior Citizens) ತರುವ ಭರವಸೆಯನ್ನು ಕೊಟ್ಟಿದ್ದಾರೆ. 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸೀನಿಯರ್ ಸಿಟಿಜನ್ಸ್ ಸಹ ಆಯುಷ್ಮಾನ್ ಭಾರತ್ ಸೌಲಭ್ಯವನ್ನು ಪಡೆದುಕೊಳ್ಳುವಂತಾಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗಕ್ಕೆ ಸೇರಿ ಜನರು ಈಗಾಗಲೇ ಆಯುಷ್ಮನ್ ಭಾರತ್ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದು ಆ ಪಟ್ಟಿಗೆ ಹಿರಿಯ ನಾಗರಿಕರು ಸೇರಿಕೊಳ್ಳಲಿದ್ದಾರೆ. ಅಲ್ಲದೆ ಟ್ರಾನ್ಸ್ ಜೆಂಡರ್ ಗಳಿಗೂ ಕೂಡ ಇದರ ಪ್ರಯೋಜನ ಸಿಗುವಂತಾಗಲಿದೆ ಎಂದರು.

ಇದನ್ನು ಓದಿ: ನಿಮ್ಮ ವಾಟ್ಸಾಪ್ ಗೆ Meta AI ಬರುವ ಮೊದಲೇ ಅದರ ಬಗ್ಗೆ ತಿಳಿಯಿರಿ, ಅದರಿಂದ ನಿಮಗೆ ಈ ಪ್ರಯೋಜನಗಳು ಸಿಗಲಿವೆ

ಸರ್ಕಾರ ಇತ್ತೀಚೆಗಷ್ಟೆ ಆಶಾಕಾರ್ಯಕರ್ತರನ್ನು ಈ ಪಟ್ಟಿಗೆ ಸೇರಿಸಿತ್ತು

2024 ಫೆಬ್ರವರಿ ತಿಂಗಳಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಶಾ ಕಾರ್ಯಕರ್ತೆಯರು, ಅಂಗವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ಆಯುಷ್ಮಾನ್ ಭಾರತ್ ಯೋಜನೆಯ ಪರಿಧಿಗೆ ತರಲಾಗುವುದೆಂದು ತಿಳಿಸಿದ್ದರು. ಈ ಯೋಜನೆಗೆಗಾಗಿ ಸರ್ಕಾರ 2023-24 ನೇ ಹಣಕಾಸು ವರ್ಷದಲ್ಲಿ ಸುಮಾರು ರೂ. 7,200 ಕೋಟಿಯನ್ನು ಮೀಸಲಿಟ್ಟಿತ್ತು. 2024-25 ನೇ ಹಣಕಾಸು ವರ್ಷಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ.

ಇದನ್ನು ಓದಿ: 3 ವರ್ಷ ಅವಧಿಯ FD ಮೇಲೆ ಈ ಬ್ಯಾಂಕು ಹೆಚ್ಚು 8% ಬಡ್ಡಿ ಕೊಡುತ್ತಿವೆ, 9 ಬ್ಯಾಂಕುಗಳ ಸಂಪೂರ್ಣ ಪಟ್ಟಿ

ಆಯುಷ್ಮಾನ್ ಯೋಜನೆ ಕುರಿತ ಇಂಟ್ರಸ್ಟಿಂಗ್ ಮಾಹಿತಿ

ಬಡಜನರ ಆರೋಗ್ಯದ ಅವಶ್ಯಕತೆಗಳಿಗೆ ಅನುಕೂಲವಾಗಲೆಂದು 2018 ರಲ್ಲಿ ಆಯುಷ್ಮಾನ್ ಭಾರತ್ (Ayushman Bharath)  ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು. ಆಯುಷ್ಮಾನ್ ಕಾರ್ಡ್ ಹೊಂದಿರುವವರು ಈ ಸ್ಕೀಮ್ ಅಡಿಯಲ್ಲಿ ರೂ.5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಇಲ್ಲಿಯವರೆಗೆ ದೇಶದಲ್ಲಿ ಸುಮಾರು 43 ಕೋಟಿಗೂ ಹೆಚ್ಚು ಜನರು ಆಯುಷ್ಮಾನ್ ಕಾರ್ಡ್ ಪಡೆದುಕೊಂಡಿರುವುದಾಗಿ ಡೇಟಾದಿಂದ ತಿಳಿಯುತ್ತಿದೆ.

where to get free treatment through Ayushmann card who can avail the benefit of the scheme
Representative Image

ಕಳೆದ 30 ದಿನಗಳಲ್ಲಿ ಸುಮಾರು 60,00,404 ಕಾರ್ಡುಗಳನ್ನು ನೀಡಿರುವುದಾಗಿ ಸರ್ಕಾರ ತಿಳಿಸಿದೆ. ಆಯುಷ್ಮಾನ್ ಕಾರ್ಡ್ ಗೆ ಉತ್ತರ ಪ್ರದೇಶದಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಈ ಒಂದೇ ಪ್ರದೇಶದಲ್ಲಿ 5 ಕೋಟಿಗೂ ಹೆಚ್ಚು ಕಾರ್ಡ್ ವಿತರಣೆಯಾಗಿದೆ ಎಂದು ಡೇಟಾದಿಂದ ತಿಳಿದುಬಂದಿದೆ. ಒಟ್ಟಾರೆ ಯಾವ ಪಕ್ಷ ಗೆದ್ದರೂ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ನೆರವಾಗುವಂತಹ ಯೋಜನೆಗಳು ಬಂದರೆ ಅಷ್ಟೆ ಸಾಕು. ಜೊತೆಗೆ ಆ ಯೋಜನೆಗಳು ಅರ್ಹರಿಗೆ ಮಾತ್ರ ಸಿಗುವಂತಾಬೇಕೆಂಬುದು ನಮ್ಮ ಆಶಯ.

ಇದನ್ನು ಓದಿ: ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಿಗೆ ರಾತ್ರೋ ರಾತ್ರಿ ಶಾಕ್, ಇಂತವರ ಜೋಬಿಗೆ ಬೀಳಲಿದೆ ಕತ್ತರಿ

Leave A Reply

Your email address will not be published.