Ultimate magazine theme for WordPress.

50 + 50MP ಕ್ಯಾಮೆರಾ, 256GB ಸ್ಟೋರೇಜ್ ಸಾಮರ್ಥ್ಯದ ಫೋನ್ ಬಿಡುಗಡೆ, ಬೆಲೆ ಮತ್ತು ಸೆಲ್ ವಿವರ ತಿಳಿಯಿರಿ

ಈ ಹ್ಯಾಂಡ್ ಸೆಟ್ 50W ವೈರ್ಡ್ ಫಾಸ್ಟ್ ಚಾರ್ಜಿಂಗ್, 5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

0

ನಥಿಂಗ್ ಫೋನ್ 2a ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾದ ಮಾಡೆಲ್ ಗಳಿಗಿಂತ ಹಲವು ಅಪ್ ಗ್ರೇಡ್ ಗಳೊಂದಿಗೆ ಬಂದಿರುವ ಈ ಸ್ಮಾರ್ಟ್ ಫೋನ್ ಆಕರ್ಷಕ ವಿನ್ಯಾಸದ ಜೊತೆಗೆ ಗ್ಲಿಫ್ ಇಂಟರ್ ಫೇಸ್ ಅನ್ನು ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್ ಫೋನ್ ಇತ್ತೀಚೆಗೆ ಬಿಡುಗಡೆಯಾದ ಒನ್ ಪ್ಲಸ್ ನಾರ್ಡ್ 4, ರಿಯಲ್ಮಿ GT 6T, ಪೊಕೊ F6 ನಂತಹ ಸ್ಮಾರ್ಟ್ ಫೋನುಗಳೊಂದಿಗೆ ಸ್ಪರ್ಧಿಸುತ್ತದೆ.

kannadatips default image
image source: original source

ನಥಿಂಗ್ ಫೋನ್ 2a ಪ್ಲಸ್ ಸ್ಪೆಸಿಫಿಕೇಶನ್ 

ಈ ಸ್ಮಾರ್ಟ್ ಫೋನ್ 4nm ಪ್ರೊಸೆಸ್ ಆಧಾರತದ ಮೀಡಿಯಾಟೆಕ್ ಡೈಮೆನ್ಸಿಟಿ 7350 ಪ್ರೊ ಚಿಪ್ಸೆಟ್ ಅನ್ನು ಹೊಂದಿದೆ. ಇದು 8GB/256GB ಇಂಟರ್ನಲ್ ಸ್ಟೋರೇಜ್ ಮತ್ತು 12GB/256GB ಸಂಗ್ರಹಣೆಯ ರೂಪಾಂತರಗಳಲ್ಲಿ ಬರುತ್ತದೆ. ಈ ಹ್ಯಾಂಡ್ ಸೆಟ್ ಆಂಡ್ರಾಯ್ಡ್ 14 ಆಧಾರಿತ ನಥಿಂಗ್ OS 2.6 ಮೂಲಕ ಕೆಲಸ ಮಾಡುತ್ತದೆ. ಕಂಪನಿಯು ಮೂರು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಸ್ವೀಕರಿಸುತ್ತದೆ ಎಂದು ಭರವಸೆ ಕೊಟ್ಟಿದೆ.

ಈ ಹ್ಯಾಂಡ್ ಸೆಟ್ 50W ವೈರ್ಡ್ ಫಾಸ್ಟ್ ಚಾರ್ಜಿಂಗ್, 5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಸಿಂಗಲ್ ಚಾರ್ಜಿಂಗ್ ನೊಂದಿಗೆ 40.6 ಗಂಟೆಗಳ ತನಕ ಪ್ಲೇಬ್ಯಾಕ್ ಟೈಮ್ ಕೊಡುತ್ತದೆ.

ನಥಿಂಗ್ ಫೋನ್ 2a ಪ್ಲಸ್ ಸ್ಮಾರ್ಟ್ ಫೋನ್ 6.7 ಇಂಚಿನ FHD+ AMOLED ಡಿಸ್ ಪ್ಲೇಯನ್ನು ಹೊಂದಿದೆ. ಇದು 1080*2412 ಪಿಕ್ಸೆಲ್ ರೆಸಲ್ಯೂಷನ್, 120Hz ರಿಫ್ರೆಶ್ ರೇಟ್, 393 ppi ಪಿಕ್ಸೆಲ್ ಡೆನ್ಸಿಟಿ, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಒದಗಿಸುತ್ತದೆ. ಈ ಫೋನ್ ಡಿಸ್ ಪ್ಲೇಯ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ

ಕ್ಯಾಮೆರಾ ವಿಷಯದಲ್ಲಿ ಈ ಸ್ಮಾರ್ಟ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. f/1.88 ಅಪರ್ಚರ್ ನೊಂದಿಗೆ 50MP ಸ್ಯಾಮ್ಸಂಗ್ GH9 ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು EIS (ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್) ಹಾಗು 10x ಡಿಟಿಯಲ್ ಜೂಮ್ ಸಾಮರ್ಥ್ಯವನ್ನು ಹೊಂದಿದೆ. 114 ಡಿಗ್ರಿ ಫೀಲ್ಡ್ ವ್ಯೂನೊಂದಿಗೆ 50MP ಸ್ಯಾಮ್ಸಂಗ್ JN1 ಕ್ಯಾಮೆರಾವನ್ನು ಹೊಂದಿರುವ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾವನ್ನು ಹೊಂದಿದೆ.

ಕನೆಕ್ಟಿವಿಟಿ ವಿಷಯದಲ್ಲಿ 5G, 4G, ವೈಫೈ 6, ಬ್ಲೂಟೂತ್ 5.3, GPS, NFC, USB-C ಚಾರ್ಜಿಂಗ್ ಪೋರ್ಟ್ ಹೊಂದಿದೆ. ಇದು ಸಹ ಗ್ಲಿಫ್ ಇಂಟರ್ ಫೇಸ್ ಅನ್ನು ಹೊಂದಿದ್ದು ಕರೆ ಮತ್ತು ಇತರ ನೋಟಿಫೀಕೇಶನ್ ಸಮಯದಲ್ಲಿ LED ಲೈಟ್ ಗಳು ಆನ್ ಆಗಿ ಆಕರ್ಷಕವಾಗಿ ಕಾಣಿಸುತ್ತದೆ. ಇದು ಡ್ಯುಯಲ್ ಸ್ಟಿರಿಯೋ ಸ್ಪೀಕರ್ ಮತ್ತು IP54 ರೇಟಿಂಗ್ ನೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತದೆ.

Nothing Phone 2a Plus
Representative Image

ನಥಿಂಗ್ ಫೋನ್ 2a ಪ್ಲಸ್ ಸ್ಪೆಸಿಫಿಕೇಶನ್ 

ಈ ಸ್ಮಾರ್ಟ್ ಫೋನ್ ಸೇಲ್ ಆಗಸ್ಟ್ 7 ರಿಂದ ಪ್ರಾರಂಭವಾಗುತ್ತದೆ. 8GB/256GB ಇಂಟರ್ನಲ್ ಸ್ಟೋರೇಜ್ ರೂಪಾಂತರವು ರೂ. 27,999 ಬೆಲೆಯನ್ನು ಹೊಂದಿದೆ. 12GB/256GB ಸ್ಟೋರೇಜ್ ರೂಪಾಂತರವು 29,999 ಬೆಲೆಯನ್ನು ಹೊಂದಿದೆ. ಈ ಎರಡು ವೇರಿಯೆಂಟ್ ಗಳ ಮೇಲೆ ಬ್ಯಾಂಕ್ ಆಫರ್ ಲಭ್ಯವಿದೆ. ಕೆಲ ಆಯ್ದ ಬ್ಯಾಂಕ್ ಕಾರ್ಡುಗಳ ಮೇಲೆ ರೂ. 2000 ರಿಯಾಯಾತಿ ಒದಗಿಸಲಾಗಿದೆ. ನಥಿಂಗ್ ಫೋನ್ 2a ಪ್ಲಸ್ ಸ್ಮಾರ್ಟ್ ಫೋನ್ ಗ್ರೇ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ದೊರೆಯಲಿದೆ.

Leave A Reply

Your email address will not be published.