Ultimate magazine theme for WordPress.

ಒನ್ ಪ್ಲಸ್ ನ ಈ ಫೋನಿನ ಮೇಲೆ 3000 ಡಿಸ್ಕೌಂಟ್, ಸೇಲ್ ಸಮಯದಲ್ಲಿ ಖರೀದಿಸಿದ್ರೆ ವೈರ್ಲೆಸ್ ಹೆಡ್ ಫೋನ್ ಉಚಿತ

ಈ ಸ್ಮಾರ್ಟ್ ಫೋನ್ 120Hz ರಿಫ್ರೆಶ್ ರೇಟ್ ಜೊತೆಗೆ 6.67 ಇಂಚಿನ FHD+ AMOLED ಡಿಸ್ ಪ್ಲೇಯನ್ನು ಹೊಂದಿದೆ. 1080*2400 ಪಿಕ್ಸೆಲ್ ರೆಸಲ್ಯೂಷನ್ , 2100 ನಿಟ್ಸ್ ಬ್ರೈಟ್ನೆಸ್, 20:9 ಆಸ್ಪೆಕ್ಟ್ ರೇಶಿಯೋ ಹೊಂದಿದೆ. 

0

ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆ ಇ-ಕಾಮರ್ಸ್ ಕಂಪನಿಗಳು ಸೇರಿದಂತೆ ಸ್ಮಾರ್ಟ್ ಫೋನ್ ಕಂಪನಿಗಳು ಗ್ರಾಹಕರಿಗೆ ಆಫರ್ ಗಳನ್ನು ನೀಡುತ್ತಿವೆ. ಡಿಸ್ಕೌಂಟ್, ಎಕ್ಸ್ ಚೇಂಜ್ ಆಫರ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ ಇದರ ಭಾಗವಾಗಿ ಒನ್ ಪ್ಲಸ್ ಕಂಪನಿ ತನ್ನ ಪ್ಲಾಗ್ ಶಿಪ್ ಸ್ಮಾರ್ಟ್ ಪೋನ್ ಗಳ ಜೊತೆಗೆ ಮಿಡ್ ರೇಂಜ್ ಮತ್ತು ಇತರ ಹ್ಯಾಂಡ್ ಸೆಟ್ ಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಿದೆ.

ಸೆಪ್ಟೆಂಬರ್ 26 ರಿಂದ ಒನ್ ಪ್ಲಸ್ ದೀಪಾವಳಿ ಸೇಲ್ (OnePlus Deepavali Sale 2024) ಆರಂಭವಾಗುತ್ತಿದ್ದು ತನ್ನ ಹಲವು ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಕಡಿಮೆ ಮಾಡುವುದರ ಜೊತೆಗೆ ಡಿಸ್ಕೌಂಟ್ ಘೋಷಿಸಿದೆ.

kannadatips default image
image source: original source

ಒನ್ ಪ್ಲಸ್ ನಾರ್ಡ್ CE 4 ಲೈಟ್ 5G ಮೇಲೆ ಡಿಸ್ಕೌಂಟ್ 

ಒನ್ ಪ್ಲಸ್ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಸೆಪ್ಟೆಂಬರ್ 26 ರ ಮಧ್ಯಾಹ್ನ 12 ಗಂಟೆಯಿಂದ ಒನ್ ಪ್ಲಸ್ ದೀಪಾವಳಿ ಸೇಲ್ (OnePlus Deepavali Sale 2024) ಶುರು ಮಾಡಲಿದೆ. ಈ ಸೇಲ್ ನಲ್ಲಿ Oneplus 12R, OnePlus 12, OnePlus Nord 4, OnePlus Nord CE 4 ಲೈಟ್ ಸೇರಿದಂತೆ ಇತರ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ.

ಒನ್ ಪ್ಲಸ್ ನಾರ್ಡ್ CE 4 ಲೈಟ್ ಸ್ಮಾರ್ಟ್ ಫೋನ್ ಮೇಲೆ ಕಂಪನಿಯು 2000 ಬ್ಯಾಂಕ್ ಡಿಸ್ಕೌಂಟ್ ನೀಡಿದೆ. ಅಲ್ಲದೆ ಸೇಲ್ ನಡೆಯುವ ಸಂದರ್ಭದಲ್ಲಿ ಖರೀದಿಸುವ ಗ್ರಾಹಕರಿಗೆ ರೂ. 1799 ಮೌಲ್ಯದ Bullets Wireless Z2 ಇಯರ್ ಫೋನ್ ಅನ್ನು ಉಚಿತವಾಗಿ ನೀಡುತ್ತಿದೆ. ಅಂದಹಾಗೆ ಈ ಆಫರ್ ಸೀಮಿತ ಅವಧಿಗೆ ಮಾತ್ರ ಇರುತ್ತದೆ. ಅಲ್ಲದೆ ಒನ್ ಕಾರ್ಡ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್ ಮೇಲೆ 2000 ಡಿಸ್ಕೌಂಟ್ ಜೊತೆಗೆ 1000 ಹೆಚ್ಚುವರಿ ರಿಯಾಯಿತಿ ಮತ್ತು ಉಚಿತ ಡೆಲಿವರಿ ಚಾರ್ಜ್ ಲಭ್ಯವಿರುತ್ತದೆ ಎಂದು ತಿಳಿಸಿದೆ. ಹೀಗಾಗಿ ಈ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರು ರೂ. 16,999 ಕ್ಕೆ ಸ್ವಂತ ಮಾಡಿಕೊಳ್ಳಬಹುದು.

OnePlus Nord CE 4 Lite
Representative Image

ಇದನ್ನು ಓದಿ: Oppo K12x 5G ಫೋನಿನಲ್ಲಿ ಹೊಸ ವೆರಿಯೆಂಟ್ ಬಿಡುಗಡೆ, ಸೇಲ್ ಮತ್ತು ಬೆಲೆ ವಿವರ ಇಲ್ಲಿದೆ

ಒನ್ ಪ್ಲಸ್ ನಾರ್ಡ್ CE 4 ಲೈಟ್ 5G ಸ್ಪೆಸಿಫಿಕೇಶನ್ಸ್

ಈ ಸ್ಮಾರ್ಟ್ ಫೋನ್ 120Hz ರಿಫ್ರೆಶ್ ರೇಟ್ ಜೊತೆಗೆ 6.67 ಇಂಚಿನ FHD+ AMOLED ಡಿಸ್ ಪ್ಲೇಯನ್ನು ಹೊಂದಿದೆ. 1080*2400 ಪಿಕ್ಸೆಲ್ ರೆಸಲ್ಯೂಷನ್ , 2100 ನಿಟ್ಸ್ ಬ್ರೈಟ್ನೆಸ್, 20:9 ಆಸ್ಪೆಕ್ಟ್ ರೇಶಿಯೋ ಹೊಂದಿದೆ.

ಈ ಹ್ಯಾಂಡ್ ಸೆಟ್ ಸ್ನಾಪ್ ಡ್ರ್ಯಾಗನ್ 695 ಚಿಪ್ಸೆಟ್ ಮೂಲಕ ಕೆಲಸ ಮಾಡುತ್ತದೆ. ಈ ಚಿಪ್ಸೆಟ್ Adreno 619 GPU, 8GB LPDDR4x, 256GB UFS 2.2 ಸ್ಟೋರೇಜ್ ನೊಂದಿಗೆ ಜೋಡಿಸಲ್ಪಟ್ಟಿದೆ. ಹಾಗು ಆಂಡ್ರಾಯ್ಡ್ 14 ಆಧಾರಿತ OxygenOS 14 ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಎರಡು ವರ್ಷಗಳ ಕಾಲ ಆಂಡ್ರಾಯ್ಡ್ ಅಪ್ಡೇಟ್ ಮತ್ತು ಮೂರು ವರ್ಷಗಳ ಕಾಲ ಸೆಕ್ಯೂರಿಟಿ ಅಪ್ಡೇಟ್ ಅನ್ನು ಸ್ವೀಕರಿಸುತ್ತದೆ.

OnePlus Nord CE4 Lite 5G
Representative Image

ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಸ್ಮಾರ್ಟ್ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ನೊಂದಿಗೆ 50MP Sony LYT-600 ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16Mp ಕ್ಯಾಮೆರಾವನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ 8GB RAM/128GB, 8GB/256GB ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು 5500mAh ಬ್ಯಾಟರಿಯ ಜೊತೆಗೆ 80W SuperVooc ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದು ವೈಫೈ 5, ಬ್ಲೂಟೂತ್ 5.1, USB-C Port, IP54 ರೇಟಿಂಗ್ ನೊಂದಿಗೆ ಬರುತ್ತದೆ.

Leave A Reply

Your email address will not be published.