Ultimate magazine theme for WordPress.

ಒಪ್ಪೊದಿಂದ ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಮತ್ತು ಸೇಲ್ ವಿವರ ತಿಳಿಯಿರಿ

ಈ ಹ್ಯಾಂಡ್ ಸೆಟ್ ಸ್ಪ್ಲಾಷ್ ಟಚ್ ಟೆಕ್ನಾಲಜಿಯನ್ನು ಹೊಂದಿದೆ ಇದರ ಪಲಿತವಾಗಿ ಒದ್ದೆ ಕೈಗಳಿಂದಲು ಫೋನ್ ಅನ್ನು ಆಪರೇಟ್ ಮಾಡಬಹುದು.

0

ಪ್ರಮುಖ ಸ್ಮಾರ್ಟ್ ಫೋನ್ ಮೇಕರ್ ಕಂಪನಿ ಒಪ್ಪೊ ತನ್ನ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ”ಒಪ್ಪೊ A3x ಸ್ಮಾರ್ಟ್ ಫೋನ್” (Oppo A3x Smartphone launched) ಅನ್ನು ಗ್ರಾಹಕರಿಗೆ ಪರಿಚಯಿಸಿದೆ.

ಈ ಸ್ಮಾರ್ಟ್ ಫೋನ್ ಬಜೆಟ್ ಫ್ರೆಂಡ್ಲಿಯಾಗಿದ್ದು ರೂ. 12,499 ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುತ್ತದೆ. ಈ ಸ್ಮಾರ್ಟ್ ಫೋನ್ ಮಿಲಿಟರಿ ಗ್ರೇಡ್ ಸರ್ಟಿಫೀಕೇಶನ್ ಪಡೆದಿದ್ದು ದೀರ್ಘಬಾಳಿಕೆಯನ್ನು ಖಚಿತಪಡಿಸುತ್ತದೆ.

kannadatips default image
image source: original source

ಒಪ್ಪೊ A3x ಸ್ಮಾರ್ಟ್ ಫೋನ್ ಸ್ಪೆಸಿಫಿಕೇಶನ್ಸ್

ಈ ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6300 SoC ಚಿಪ್ಸೆಟ್ ಅನ್ನು ಪಡೆದಿದೆ. ಇದಕ್ಕೆ ಬಲವಾಗಿ Arm Mali G57 GPU ಜೋಡಿಸಲ್ಪಟ್ಟಿದೆ. ಬಳಕೆದಾರರಿಗೆ ಫೋನ್ ಬಳಸುವ ಸಮಯದಲ್ಲಿ ವೇಗದ ಅನುಭವ ನೀಡಲು LPDDR4x RAM ಮತ್ತು eMMC 5.1 ತಂತ್ರಜ್ಞಾನವನ್ನು ಬಳಸುತ್ತದೆ. ಈ ಹ್ಯಾಂಡ್ ಸೆಟ್ 4GB/64GB ಮತ್ತು 4GB/128GB ಸ್ಟೋರೇಜ್ ವೇರಿಯೆಂಟ್ ನಲ್ಲಿ ಲಭ್ಯವಿದೆ. ಇದು ಆಂಡ್ರಾಯ್ಡ್ 14 ಆಧಾರಿತ ColorOS 14.1 ಮೂಲಕ ಕೆಲಸ ಮಾಡುತ್ತದೆ.

ಸ್ಕ್ರೀನ್ ವಿಷಯಕ್ಕೆ ಬಂದ್ರೆ 120Hz ರಿಫ್ರೆಶ್ ರೇಟ್ ಜೊತೆಗೆ 6.67 ಇಂಚಿನ HD+ LCD ಡಿಸ್ ಪ್ಲೇಯನ್ನು ಹೊಂದಿದೆ. ಈ ಸ್ಕ್ರೀನ್ ರೈನ್ ಫೋರ್ಸ್ಡ್ ಪಾಂಡಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಅಲ್ಲದೆ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಜೊತೆಗೆ 1000 nits ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ.

ಇದನ್ನು ಓದಿ: 108MP ಕ್ಯಾಮೆರಾ, 512GB ಸ್ಟೋರೇಜ್ ಹೊಂದಿರುವ ಹಾನರ್ ಸ್ಮಾರ್ಟ್ ಫೋನ್ ಲಾಂಚ್, ಸೇಲ್ ಯಾವಾಗ ಅಂದ್ರೆ

ಕ್ಯಾಮೆರಾ ವಿಷಯದಲ್ಲಿ ಈ ಸ್ಮಾರ್ಟ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. 8MP ಪ್ರೈಮರಿ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5100mAh ಬ್ಯಾಟರಿಯ ಜೊತೆಗೆ SuperVooc ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದು ಡ್ಯುಯಲ್ ನ್ಯಾನೋ ಸಿಮ್ ಜೊತೆಗೆ 5G, 4G, ವೈಫೈ 5, ಬ್ಲೂಟೂತ್ 5.3, GPS, USB-C ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತದೆ.

ಈ ಹ್ಯಾಂಡ್ ಸೆಟ್ ಸ್ಪ್ಲಾಷ್ ಟಚ್ ಟೆಕ್ನಾಲಜಿಯನ್ನು ಹೊಂದಿದೆ ಇದರ ಪಲಿತವಾಗಿ ಒದ್ದೆ ಕೈಗಳಿಂದಲು ಫೋನ್ ಅನ್ನು ಆಪರೇಟ್ ಮಾಡಬಹುದು. ಇದು MIL-STD 810H ಮಿಲಿಟರಿ ಗ್ರೇಡ್ ಶಾಕ್ ರೆಸಿಸ್ಟೆನ್ಸ್ ಸರ್ಟಿಫಿಕೇಶನ್ ಪಡೆದುಕೊಂಡಿದೆ ಮತ್ತು IP54 ರೇಟಿಂಗ್ ನೊಂದಿಗೆ ಡಸ್ಟ್ ಮತ್ತು ಧೂಳಿನಿಂದ ರಕ್ಷಣೆ ಕೊಡುತ್ತದೆ.

Oppo A3x 5G
Representative Image

ಒಪ್ಪೊ A3x ಸ್ಮಾರ್ಟ್ ಫೋನ್ ಬೆಲೆ

ಈ ಸ್ಮಾರ್ಟ್ ಪೋನ್ 4GB/64GB ಸ್ಟೋರೇಜ್ ರೂಪಾಂತರುವ ರೂ. 12,499 ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ. 4GB/128GB ಸ್ಟೋರೇಜ್ ಇರುವ ರೂಪಾಂತರುವ 13,499 ಬೆಲೆಯನ್ನು ಹೊಂದಿದೆ. ಇದನ್ನು ಒಪ್ಪೊ ಇಂಡಿಯಾ ವೆಬ್ಸೈಟ್ ಮತ್ತು ಇತರ ಆಫ್ಲೈನ್ ಸ್ಟೋರ್ ಗಳಲ್ಲಿ ಖರೀದಿ ಮಾಡಬಹುದು.

ಆಗಸ್ಟ್ 7 ರಿಂದ ಈ ಸ್ಮಾರ್ಟ್ ಫೋನ್ ಸೇಲ್ ಆಗಲಿದೆ. ಆಯ್ದ ಬ್ಯಾಂಕ್ ಕಾರ್ಡುಗಳ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್ ಪಡೆಯಬಹುದು ಎಂದು ಕಂಪನಿಯು ಹೇಳಿದೆ. ಈ ಹ್ಯಾಂಡ್ ಸ್ಪಾರ್ಕಲ್ ಬ್ಲ್ಯಾಕ್, ಸ್ಟಾರ್ರಿ ಪರ್ಪಲ್ , ಸ್ಟಾರ್ಲೈಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನು ಓದಿ: 50 + 50MP ಕ್ಯಾಮೆರಾ, 256GB ಸ್ಟೋರೇಜ್ ಸಾಮರ್ಥ್ಯದ ಫೋನ್ ಬಿಡುಗಡೆ, ಬೆಲೆ ಮತ್ತು ಸೆಲ್ ವಿವರ ತಿಳಿಯಿರಿ

Leave A Reply

Your email address will not be published.