Ultimate magazine theme for WordPress.

ಕಡಿಮೆ ಬೆಲೆಯಲ್ಲಿ ಬಲಿಷ್ಠ ಬಾಳಿಕೆಯ ಫೋನ್ ಬಿಡುಗಡೆ ಮಾಡಿದ ಒಪ್ಪೊ, ಆರ್ಮ್ ಬಾಡಿ ಜೊತೆ ಸ್ಲಿಮ್ ಡಿಸೈನ್

ಈ ಹ್ಯಾಂಡ್ ಸೆಟ್ ಕ್ವಾಲ್ಕಮ್ ನ 6nm ಪ್ರೊಸೆಸ್ ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್ಸೆಟ್ ಮತ್ತು ARM Mali G57 MC2 GPU ಜೊತೆಗೆ ಬರುತ್ತದೆ.

1

ಒಪ್ಪೊ ಕಂಪನಿಯು ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಬಲಿಷ್ಠವಾದ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಳೆದವಾರ ಸುಳಿವು ಕೊಟ್ಟಂತೆ ”ಒಪ್ಪೊ K12x 5G” (Oppo K12x 5G) ಸ್ಮಾರ್ಟ್ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶೇಷವೆಂದರೆ ಈ ಸ್ಮಾರ್ಟ್ ಮಿಲಿಟರಿ ಗ್ರೇಡ್ MIL-STD-810H ಸ್ಟಟಿಫಿಕೇಶನ್ ಪಡೆದಿದ್ದು ಬಜೆಟ್ ಬೆಲೆಯಲ್ಲಿ ಈ ಸರ್ಟಿಫಿಕೇಶನ್ ನೊಂದಿಗೆ ಬಿಡುಗಡೆಯಾಗುತ್ತಿರುವ ಮೊದಲ ಫೋನ್ ಎಂದು ಗುರುತಿಸಿಕೊಂಡಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 360 ಡಿಗ್ರಿ ಡ್ಯಾಮೇಜ್ ಪ್ರೂಫ್ ಆರ್ಮ್ ಬಾಡಿಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನಿನಲ್ಲಿರುವ ಮತ್ತೊಂದು ವಿಶೇಷತೆಯೆಂದರೆ ಇದು ಕೇವಲ 7.68 mm ಥಿಕ್ನೆಸ್ ಅನ್ನು ಹೊಂದಿದೆ.

kannadatips default image
image source: original source

ಒಪ್ಪೊ K12x 5G ಫೀಚರ್, ಸ್ಪೆಸಿಫಿಕೇಶನ್ಸ್ 

ಈ ಸ್ಮಾರ್ಟ್ ಫೋನ್ 6.67 ಇಂಚಿನ HD+ LCD ಡಿಸ್ ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಹ್ಯಾಂಡ್ ಸೆಟ್ 1000 nits ಗರಿಷ್ಠ ಬ್ರೈಟ್ನೆಸ್ ಜೊತೆಗೆ ಡ್ಯುಯಲ್ ರೈನ್ ಫೋರ್ಸ್ಡ್  ಪಾಂಡಾ ಗ್ಲಾಸ್ ಪ್ರೊಟೆಕ್ಷನ್ ನೊಂದಿಗೆ ಬರುತ್ತದೆ. ಇದು ಸ್ಪ್ಲಾಸ್ ಟಚ್ ತಂತ್ರಜ್ಞಾನವನ್ನು ಸಪೋರ್ಟ್ ಮಾಡುತ್ತೆ ಅಂದರೆ ಇದು ಬಳಕೆದಾರರು ಒದ್ದೆಯಾದ ಕೈಗಳಿಂದಲೂ ಫೋನ್ ಅನ್ನು ಆಪರೇಟ್ ಮಾಡಬಹುದು.

ಈ ಹ್ಯಾಂಡ್ ಸೆಟ್ ಕ್ವಾಲ್ಕಮ್ ನ 6nm ಪ್ರೊಸೆಸ್ ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್ಸೆಟ್ ಮತ್ತು ARM Mali G57 MC2 GPU ಜೊತೆಗೆ ಬರುತ್ತದೆ. ಇದು ದೈನಂದಿನ ಕಾರ್ಯಗಳಿಗೆ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಈ ಹ್ಯಾಂಡ್ ಸೆಟ್ ಆಂಡ್ರಾಯ್ಡ್ 14 ಆಧಾರಿತ Color OS 14 ಮೂಲಕ ಕಾರ್ಯನಿರ್ವಹಿಸಲಿದೆ. ಇದು LPDDR4X RAM ಮತ್ತು UFS 2.2 ಸ್ಟೋರೇಜ್ ತಂತ್ರಜ್ಞಾವನ್ನು ಬಳಸುತ್ತದೆ. ಬಳಕೆದಾರರು ಸ್ಟೋರೇಜ್ ಅಗತ್ಯವಿದ್ದಾಗ ಮೈಕ್ರೋ ಎಸ್ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದು.

ಇದನ್ನು ಓದಿ: ಶಿಯೋಮಿ 14 ಸಿವಿ ಲಿಮಿಟೆಡ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಈ ಕಾರ್ಡ್ ಮೇಲೆ 3000 ಡಿಸ್ಕೌಂಟ್

ಕ್ಯಾಮೆರಾ ವಿಷಯದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 32MP ಪ್ರಧಾನ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ನೊಂದಿಗೆ ಬರುತ್ತದೆ. ಇದರೆ ಜೊತೆಗೆ 2MP ಪ್ರೋರ್ಟ್ರೇಟ್ ಲೆನ್ಸ್ ಪಡೆದಿದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಈ ಹ್ಯಾಂಡ್ ಸೆಟ್ 5,100mAh ಬ್ಯಾಟರಿಯ ಜೊತೆಗೆ 45W SuperVOOC ಚಾರ್ಜಿಂಗ್ ಬೆಂಬಲಸಿತ್ತದೆ. ಇದು 5G, 4G, ವೈಫೈ 7 ಮತ್ತು ವೈರ್ಲೆಸ್ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.1, ನ್ಯಾವಿಗೇಷನ್ ಗಾಗಿ GPS ಸೇರಿದಂತೆ ಸಮಗ್ರ ಸಂಪರ್ಕದ ಆಯ್ಕೆಗಳನ್ನು ಒದಗಿಸುತ್ತದೆ. ಡೇಟಾ ವರ್ಗಾವಣೆ ಮತ್ತು ಚಾರ್ಜಿಂಗ್ ಗಾಗಿ USB Type-C ಪೋರ್ಟ್ ನೊಂದಿಗೆ ಬರುತ್ತದೆ. ಇದು MIL-STD-810H ಸರ್ಟಿಫಿಕೇಶನ್ ಮತ್ತು IP54 ರೇಟಿಂಗ್ ನೊಂದಿಗೆ ಬರುತ್ತದೆ

Oppo K12x 5g
Representative Image

ಒಪ್ಪೊ K12x 5G ಬೆಲೆ

6GB/128GB ರೂಪಾಂತರವು ರೂ. 12,999 ಬೆಲೆಯನ್ನು ಹೊಂದಿದೆ. 8GB/256GB ವೇರಿಯೆಂಟ್ 15,999 ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ಬ್ರೀಜ್ ಬ್ಲೂ ಮತ್ತು ಮಿಡ್ನೈಟ್ ವೈಲೆಟ್ ಎಂಬ ಎರಡು ಬಣ್ಣಗಳ ಆಯ್ಕೆಯೊಂದಿಗೆ ಬರುತ್ತದೆ.

ಈ ಸ್ಮಾರ್ಟ್ ಫೋನ್ ಆಗಸ್ಟ್ 2 ರಿಂದ ಫ್ಲಿಪ್ ಕಾರ್ಟ್ ಮತ್ತು ಒಪ್ಪೊ ಇಂಡಿಯಾ ವೆಬ್ಸೈಟ್ ನಲ್ಲಿ ಖರೀದಿಗೆ ದೊರೆಯಲಿದೆ. ಲಾಂಚ್ ಆಫರ್ ಭಾಗವಾಗಿ ರೂ.1000 ಡಿಸ್ಕೌಂಟ್ ಸಹ ಲಭಿಸಲಿದೆ.

ಇದನ್ನು ಓದಿ: ರೆಡ್ಮಿ ಪ್ಯಾಡ್ ಪ್ರೊ 5G ಟ್ಯಾಬ್ ಮಾರುಕಟ್ಟೆಗೆ ಬಿಡುಗಡೆ, ರೂ. 21,999 ಬೆಲೆಯೊಂದಿಗೆ ಆರಂಭ

Leave A Reply

Your email address will not be published.