Ultimate magazine theme for WordPress.

ಕಿತ್ತಳೆ ಹಣ್ಣು ತಿನ್ನವುದರಿಂದ ಈ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ

ಕಿತ್ತಳೆ(Orange) ಹಣ್ಣು ಹಲವಾರು ಪೋಷಕಾಂಶಗಳನ್ನು ಹೊಂದಿದೆ ಅದರಲ್ಲೂ ಮುಖ್ಯವಾಗಿ ವಿಟಮಿನ್ ಸಿ ಸತ್ವವನ್ನು ಸಮೃದ್ಧವಾಗಿ ಹೊಂದಿದೆ. ಇದು ರೋಗನಿರೋಧಕ ಶಕ್ತಿ, ಕೂದಲು, ಚರ್ಮ, ಕಣ್ಣು ಸೇರಿದಂತೆ ದೇಹಕ್ಕೆ ತುಂಬಾ ಉಪಯುಕ್ತವಾದ ಹಣ್ಣಾಗಿದೆ.

1

ಪೀಠಿಕೆ

ಕಿತ್ತಳೆ(Orange) ಬಹುರುಚಿಯಾದ ಹಾಗು ಪುಷ್ಟಿಕರವಾದ ಹಣ್ಣುಗಳಲ್ಲಿ ಒಂದು. ಕಿತ್ತಳೆ(Orange) ಸಿಹಿ(Sweet) ಮತ್ತು ಹುಳಿ(Sour) ರುಚಿಯನ್ನು ಹೊಂದಿದ್ದು ಎಲ್ಲರೂ ಈ ಹಣ್ಣನ್ನು ಇಷ್ಟ ಪಡುತ್ತಾರೆ.

ಕಿತ್ತಳೆ(Orange) ಹಣ್ಣು ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರುತ್ತದೆ. ಸಿಟ್ರಸ್ ಎಂದರೆ ಹುಳಿ ಗುಣವನ್ನು ಹೊಂದಿರುವ ಹಣ್ಣು ಎಂದರ್ಥ. ಕಿತ್ತಳೆ(Orange) ಹಣ್ಣು ಹಲವಾರು ಪೋಷಕಾಂಶಗಳನ್ನು ಹೊಂದಿದೆ ಅದರಲ್ಲೂ ಮುಖ್ಯವಾಗಿ ವಿಟಮಿನ್ ಸಿ ಸತ್ವವನ್ನು ಸಮೃದ್ಧವಾಗಿ ಹೊಂದಿದೆ. ಇದು ರೋಗನಿರೋಧಕ ಶಕ್ತಿ, ಕೂದಲು, ಚರ್ಮ, ಕಣ್ಣು ಸೇರಿದಂತೆ ದೇಹಕ್ಕೆ ತುಂಬಾ ಉಪಯುಕ್ತವಾದ ಹಣ್ಣಾಗಿದೆ.

ಕಿತ್ತಳೆ ಹಣ್ಣಿನ ಇತಿಹಾಸ

ಕಿತ್ತಳೆ ಮಾನವನಿಗೆ ಬಹಳ ಹಿಂದಿನಿಂದಲೂ ಪರಿಚಯವಿದೆ. ಏಷ್ಯಾ ಖಂಡದ ಉಷ್ಣವಲಯ ಅದರಲ್ಲಿಯೂ ಮಲಯ ದ್ವೀಪಸ್ತೋಮಗಳು ಕಿತ್ತಳೆಯ ತವರು. ಅಲ್ಲಿಂದ ಭಾರತಕ್ಕೂ ಆಫ್ರಿಕಾದ ತೀರ ಪ್ರದೇಶಗಳಿಗೂ ಅಲ್ಲಿಂದ ಮೆಡಿಟರೇನಿಯನ್ ತೀರ ಪ್ರದೇಶಗಳಿಗೂ ಹರಡಿತೆಂದು ಹೇಳಲಾಗಿದೆ. ” ಸ್ಯಾಮುಯಲ್ ಟಾಲ್ಕಾ ವಸ್ಕಿ ಸಿಟ್ರಿಕ್ ಜಾತಿಯ ಸಸ್ಯಗಳ ಇತಿಹಾಸ ಕುರಿತು ಬರೆದ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಟೊಮ್ಯಾಟೊ ಬಗ್ಗೆ ನಿಮಗೆ ಗೊತ್ತಿಲ್ಲದ 20 ವಿಷಯವಿದು..!

ಕಿತ್ತಳೆ ಹಣ್ಣು ರುಟೇಸಿ(Rutaceae) ಕುಟುಂಬಕ್ಕೆ ಸೇರಿದ್ದು ಇದನ್ನು ಸಸ್ಯಶಾಸ್ತ್ರಿಯವಾಗಿ ಸಿಟ್ರಸ್ ಸೈನೆನ್ಸಿಸ್ ಎಂದು ಕರೆಯುತ್ತಾರೆ. ಕಿತ್ತಳೆಯನ್ನು ಹಲವು ರಾಜ್ಯಗಳಲ್ಲಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಬಂಗಾಳಿಯಲ್ಲಿ ಕಮಲ, ಮೂಸಂಬಿ, ನೆಂಬು ಎಂತಲು ಒರಿಯಾದಲ್ಲಿ ನಾರಂಗ ಎಂದು, ತಮಿಳಿನಲ್ಲಿ ನಾಗರುಕಂ, ಪಂಜಾಬಿಯಲ್ಲಿ ಮಾಲ್ಪಾ ಎಂದು ಕರೆಯುತ್ತಾರೆ.

ಕಿತ್ತಳೆ ಹಣ್ಣನ್ನು ಸಂತ್ರ (Santra) ಎಂದು ಕರೆಯುತ್ತಾರೆ. ಇದನ್ನು ಸಂಸ್ಕೃತದಲ್ಲಿ ನಾರಂಜಾ ಎಂಬ ಅರ್ಥ ಇದೆ..

ಕಿತ್ತಳೆ ಪೋಷಕಾಂಶಗಳು

ನೂರು ಗ್ರಾಂ ಕಿತ್ತಳೆ ಹಣ್ಣಿನಲ್ಲಿ ಈ ಕೆಳಕಂಡಂತೆ ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ.

  • ಕಾರ್ಬೋಹೈಡ್ರೇಟ್ಗಳು: 11.8ಗ್ರಾಂ
  • ಪ್ರೋಟೀನ್: 0.91 ಗ್ರಾಂ
  • ಕೊಬ್ಬುಗಳು: 0.15 ಗ್ರಾಂ
  • ಕ್ಯಾಲೋರಿ:52 ಗ್ರಾಂ
  • ನೀರು: 86.7 ಗ್ರಾಂ
  • ಫೈಬರ್: 2 ಗ್ರಾಂ
  • ಸಕ್ಕರೆ: 8.57ಗ್ರಾಂ

ಜೀವಸತ್ವಗಳು ಮತ್ತು ಖನಿಜಗಳು

  • ಸೋಡಿಯಂ: 9 ಮಿಗ್ರಾಂ
  • ಪೊಟ್ಯಾಷಿಯಮ್: 166 ಮಿಗ್ರಾಂ
  • ಕ್ಯಾಲ್ಸಿಯಂ: 43 ಮಿಗ್ರಾಂ
  • ಮೆಗ್ನೀಷಿಯಮ್: 10.7 ಮಿಗ್ರಾಂ
  • ಕಬ್ಬಿಣ: 0.33 ಮಿಗ್ರಾಂ
  • ರಂಜಕ: 23 ಮಿಗ್ರಾಂ
  • ಮ್ಯಾಂಗನೀಸ್: 0.029 ಮಿಗ್ರಾಂ
  • ತಾಮ್ರ: 0.064 ಮಿಗ್ರಾಂ
  • ಸತು: 0.11 ಮಿಗ್ರಾಂ
  • ವಿಟಮಿನ್ ಸಿ : 59.1 ಗ್ರಾಂ
  • ವಿಟಮಿನ್ ಬಿ1 : 0.068 ಮಿಗ್ರಾಂ
  • ವಿಟಮಿನ್ ಬಿ2 : 0.051 ಮಿಗ್ರಾಂ
  • ವಿಟಮಿನ್ ಬಿ3 : 0.425 ಮಿಗ್ರಾಂ
  • ವಿಟಮಿನ್ ಬಿ5 : 0.261 ಮಿಗ್ರಾಂ
  • ವಿಟಮಿನ್ ಬಿ6 : 0. 079 ಮಿಗ್ರಾಂ

ಕಿತ್ತಳೆ ಹಣ್ಣಿನ ಪ್ರಯೋಜನ

ಕಿತ್ತಳೆಯನ್ನು ನೇರವಾಗಿ ತಿನ್ನಲು ಉಪಯೋಗಿಸಬಹುದು ಅಲ್ಲದೆ ಜ್ಯೂಸ್ ರೀತಿ ಕುಡಿಯಬಹುದು. ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ,ರಂಜಕ, ಮ್ಯಾಂಗನೀಸ್, ಸತು, ತಾಮ್ರ ಸೇರಿದಂತೆ ಹಲವಾರು ಪೋಷಕಾಂಶಗಳು ಮಿಳಿತಗೊಂಡಿದೆ.

1 ಹೃದಯದ ಆರೋಗ್ಯ ವೃದ್ಧಿಸುತ್ತದೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಿಟ್ರಸ್ ಹಣ್ಣುಗಳು ಹೋಮೋಸಿಸ್ಪೈನ್(ಅಮೈನೋ ಆಮ್ಲ) ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯ ಕಾಯಿಲೆಗಳಿಂದ ಹೃದಯವನ್ನು ರಕ್ಷಿಸುತ್ತದೆ. ಕಿತ್ತಳೆಯು ವಿಟಮಿನ್ ಸಿ, ಫ್ಲೇವನಾಯ್ಡ್ ಗಳು ಮತ್ತು ಕ್ಯಾರೊಟಿನಾಯ್ಡ್ ಗಳಂತಹ ‌ಘಟಕಗಳನ್ನು ಹೊಂದಿದ್ದು ಇದು ಹೃದಯದ ರಕ್ಷಕ ಭಟನಾಗಿ ಕೆಲಸ ಮಾಡುತ್ತದೆ. ಅಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ: Ash Gourd 10 Benefits : ಪ್ರಾಣಶಕ್ತಿಯನ್ನು ಹೊಂದಿರುವ ಈ ಬೂದುಗುಂಬಳಕಾಯಿ ಆಹಾರದಲ್ಲಿ ಹೆಚ್ಚಾಗಿ ಬಳಸಿ..!

2 ಕ್ಯಾನ್ಸರ್ ತಡೆಗಟ್ಟುತ್ತದೆ

ಕಿತ್ತಳೆಯು ಲಿಮೋನೆನ್ ಅಂಶವನ್ನು ಹೊಂದಿದ್ದು ಇದು ಚರ್ಮ, ಬಾಯಿ, ಸ್ತನ, ಶ್ವಾಸಕೋಶ, ಕರುಳು ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನ ವರದಿಗಳು ತಿಳಿಸಿವೆ.

3 ಅಲ್ಸರ್ ತಡೆಯುತ್ತದೆ

ಕಿತ್ತಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಉಪಯೋಗಕಾರಿಯಾಗಿರುತ್ತದೆ. ಇದು ಹೆಲಿಕೋಬ್ಯಾಕ್ಟರ್ ಪೈಲೋರಿ(ಒಂದು ಬಗೆಯ ಬ್ಯಾಕ್ಟೀರಿಯಾ) ನಿಂದ ಉಂಟಾಗುವ ಅಲ್ಸರ್ ಅನ್ನು ಕಡಿಮೆ ಮಾಡುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಸೆಳೆತ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಮಿತವಾಗಿ ಸೇವಿಸಿದರೆ ಮಾತ್ರ

4 ಒತ್ತಡವನ್ನು ಕಡಿಮೆ ಮಾಡುತ್ತದೆ

ಕಿತ್ತಳೆಯ ಸೇವನೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಲವಾರು ಥೆರಪಿಸ್ಟ್ ಗಳು ಕಿತ್ತಳೆಯ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಇದು ಮನಸಿನ ಉದ್ವೇಗವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ: ಪಪ್ಪಾಯಿ ಹಣ್ಣಿನ 10 ಉಪಯೋಗಗಳು ನಿಮಗೆ ತಿಳಿದಿರಲಿ..!

5 ಟೈಫಾಯಿಡ್ ಜ್ವರ ಕಡಿಮೆ ಮಾಡುತ್ತದೆ

ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾವು ಟೈಫಾಯಿಡ್ ಜ್ವರವನ್ನು ಉಂಟುಮಾಡುತ್ತದೆ. ಕಿತ್ತಳೆಯಲ್ಲಿ ಕಂಡು ಬರುವ ಕೆಲವು ಘಟಕಗಳಾದ ಫ್ಲೇವನಾಯ್ಡ್ ಗಳು ಮತ್ತು ಸಪೋನಿನ್ ಟೈಫಾಯಿಡ್ ಕಡಿಮೆ ಮಾಡಲು ನೆರವಾಗುತ್ತವೆ

6 ಸಂಧಿವಾತ ನಿವಾರಿಸುತ್ತದೆ

ಕಿತ್ತಳೆಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು(ಝೀಕ್ಸಾಂಥಿನ್, ಕ್ಯಾರೊಟಿನಾಯ್ಡ್ಸ್, ಬೀಟಾ-ಕ್ರಿಪ್ಟೋಕ್ಯಾಂಥಿನ್) ಸಂದಿವಾತದ ಅಪಾಯವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೆಲವು ವರದಿಗಳು ಸಂದಿವಾತ ಇರುವವರು ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಶೇಕಡಾ 52ರಷ್ಟು ಸಮಸ್ಯೆಯು ಕಡಿಮೆಯಾಗಿದೆ ಎಂದು ತಿಳಿಸಿವೆ.

ಇದನ್ನು ಓದಿ: ಆನೆಬಲದ ಶಕ್ತಿ ಇರುವ ಅಂಜೂರ(Anjeer) ಹಣ್ಣುನ್ನು ಇಂದೇ ಸೇವಿಸಿ..!

7 ತೂಕ ಇಳಿಸಲು ಸಹಕಾರಿ

ಕಿತ್ತಳೆ ನೈಸರ್ಗಿಕವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಅಲ್ಲದೆ ಇದರಲ್ಲಿರುವ ನಾರಿನಾಂಶವು ಬೊಜ್ಜು ಕರಗಿಸಲು ನೆರವಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಕಿತ್ತಳೆ ಉತ್ತಮ ಆಯ್ಕೆಯಾಗಿದೆ. ಇದನ್ನು ಜ್ಯೂಸ್, ಸ್ಮೂಥಿ ಮತ್ತು ಸಲಾಡ್ ರೂಪದಲ್ಲಿ ಸೇವಿಸಬಹುದು.

8 ಚರ್ಮದ ಆರೈಕೆ

ಕಿತ್ತಳೆಯ ಸೇವನೆಯು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಕಪ್ಪು ಕಲೆಗಳು, ಮೊಡವೆ ಕಲೆಗಳುನ್ನು ನಿವಾರಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮವು ಕಾಂತಿಯುಕ್ತವಾಗಿ ಕಾಣುವಂತೆ ಮಾಡುತ್ತದೆ.

9 ಕಣ್ಣಿನ ಆರೋಗ್ಯ

ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳು ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದು ಕಣ್ಣಿನ ಪೊರೆಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುರ್ಲ ಡಿಜೆನರೇಶನ್ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸಮಾರೋಪ

ಕಿತ್ತಳೆ ಹಣ್ಣು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ಆರೋಗ್ಯ ರಕ್ಷಣೆಯಲ್ಲಿ ಇದರ ಪಾತ್ರ ಹಿರಿದು. ಕಿತ್ತಳೆಗೆ ಶಿಲಿಂಧ್ರಗಳನ್ನು ನಾಶ ಮಾಡುವ ಶಕ್ತಿಯಿದೆ. ಅಲ್ಲದೆ ಲೋಮನಾಳದ ಒಡೆಯುವಿಕೆಯನ್ನು ತಡೆಗಟ್ಟುತ್ತದೆ. ಹೀಗೆ ಹಲವು ಪ್ರಯೋಜನಗಳನ್ನು ಹೊಂದಿರುವ ಕಿತ್ತಳೆ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಆದರೆ ಮಿತವಾಗಿ ಸೇವಿಸುವುದನ್ನು ಮಾತ್ರ ಮರೆಯದಿರಿ

ಧನ್ಯವಾದಗಳು…

 

ಕಿತ್ತಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು..?

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸತ್ವ ಸಮೃದ್ಧವಾಗಿದೆ. 100 ಗ್ರಾಂ ಹಣ್ಣಿನಲ್ಲಿ 60 ಮಿಲಿಗ್ರಾಂ ನಷ್ಟು ಇರುತ್ತದೆ.

ಕಿತ್ತಳೆ ಹಣ್ಣಿನಲ್ಲಿರುವ ಆಮ್ಲ ಯಾವುದು..?

ಕಿತ್ತಳೆ ಮತ್ತು ನಿಂಬೆ ಹಣ್ಣಿನಲ್ಲಿರುವುದು ಸಿಟ್ರಿಕ್ ಆಮ್ಲ

 

Source National institutes of Health centers for Disease Control and prevention
1 Comment
  1. Asha says

    Nice Article

Leave A Reply

Your email address will not be published.