Ultimate magazine theme for WordPress.

ಬ್ಯಾಂಕಿಗಿಂತ ಹೆಚ್ಚು ಬಡ್ಡಿ ನೀಡುತ್ತಿದೆ ಅಂಚೆ ಕಚೇರಿಯ ಈ ಸ್ಕೀಮ್, ಹೂಡಿಕೆ ಜೊತೆಗೆ ತೆರಿಗೆ ವಿನಾಯಿತಿ

ಫೋಸ್ಟ್ ಆಫೀಸಿನಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳ ಪೈಕಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸ್ಕೀಮ್ ಒಂದಾಗಿದ್ದು ಇದು ಸ್ಥಿರ ಆದಾಯ ಕೊಡುವ ಹೂಡಿಕೆ ಯೋಜನೆಯಾಗಿದೆ.

0

ಅಷ್ಟೋ ಇಷ್ಟೋ ಕೂಡಿಟ್ಟ ಹಣವನ್ನು ಸುಮ್ಮನೆ ಮನೆಯಲ್ಲಿಟ್ಟರೆ ಯಾವ ಪ್ರಯೋಜನವೂ ಸಿಗೋಲ್ಲ. ಅದರ ಬದಲಿಗೆ ಷೇರು ಮಾರುಕಟ್ಟೆ(Stock Market), ಪೋಸ್ಟ್ ಆಫೀಸ್ (Post Office) ಮತ್ತು ಬ್ಯಾಂಕುಗಳ ಎಫ್ಡಿಗಳಲ್ಲಿ ಹೂಡಿಕೆ ಮಾಡುವುದರಿಂದ ಒಂದಷ್ಟು ಆದಾಯವಾದರೂ ಬರುತ್ತದೆ. ಇನ್ನು ಹೂಡಿಕೆದಾರರ (Investors) ತಮ್ಮ ಹೂಡಿಕೆ ಸುರಕ್ಷಿತವಾಗಿರಬೇಕು ಅಂತಾ ಭಾವಿಸೋದು ಸಹಜ. ಹೀಗೆ ಸುರಕ್ಷಿತ ಹೂಡಿಕೆಗಳ ಆಯ್ಕೆಗಳಲ್ಲಿ ಪೋಸ್ಟ್ ಆಫೀಸ್ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತೆ.

ಫೋಸ್ ಆಫೀಸ್ ನಲ್ಲಿ ಲಭ್ಯವಿರುವ ಸಣ್ಣ ಉಳಿತಾಯ ಯೋಜನೆಗಳು ಜನಸಾಮಾನ್ಯರನ್ನು ಆಕರ್ಷಿಸಿತ್ತಿದೆ. ರಿಕರಿಂಗ್ ಡೆಪಾಸಿಟ್ ನಿಂದ ಹಿಡಿದು ಫಿಕ್ಸೆಡ್ ಡೆಪಾಸಿಟ್ ತನಕ ಅನೇಕ ಸ್ಕೀಮ್ ಗಳು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಇವುಗಳ ಪೈಕಿ ಇಂದು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್ (NSC) ಕುರಿತು ತಿಳಿಯೋಣ ಬನ್ನಿ

kannadatips default image
image source: original source

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್ (National Savings Certificate)  

ಫೋಸ್ಟ್ ಆಫೀಸಿನಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳ ಪೈಕಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸ್ಕೀಮ್ ಒಂದಾಗಿದ್ದು ಇದು ಸ್ಥಿರ ಆದಾಯ ಕೊಡುವ ಹೂಡಿಕೆ ಯೋಜನೆಯಾಗಿದೆ. ನೀವು ಯಾವುದೇ ಅಂಚೆ ಕಚೇರಿಯಲ್ಲಿ ಸುಲಭವಾಗಿ ಇದರ ಖಾತೆಯನ್ನು ತೆರೆಯಬಹುದು. ಈ ಸ್ಕೀಮ್ ಸಣ್ಣ ಮತ್ತು ಮಧ್ಯಮ ಆದಾಯ ಹೊಂದಿರುವ ಹೂಡಿಕೆದಾರಿಗೆ ಆದಾಯ ತೆರಿಗೆ ಉಳಿತಾಯ ಮಾಡಲು ನೆರವಾಗುತ್ತೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್ ಸ್ಕೀಮ್ ಹೂಡಿಕೆದಾರರಿಗೆ ಅನೇಕ ಬ್ಯಾಂಕುಗಳು ಫಿಕ್ಸೆಡ್ ಡೆಪಾಸಿಟ್ ಮೇಲೆ ಕೊಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ಒದಗಿಸುತ್ತದೆ.

ಇದನ್ನು ಓದಿ: ಗ್ರಾಹಕರಿಗೆ ಐಡಿಬಿಐ ಬ್ಯಾಂಕಿನಿಂದ ಶುಭವಾರ್ತೆ, ‌FD ಇಟ್ಟವರಿಗೆ ಸಿಗಲಿದೆ ಇದರ ಪ್ರಯೋಜನ

ಎಷ್ಟು ಬಡ್ಡಿ ಸಿಗುತ್ತೆ..? ಎಷ್ಟು ಹೂಡಿಕೆ ಮಾಡಬಹುದು..?

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್ ನಲ್ಲಿ ಕನಿಷ್ಠ ಐದು ವರ್ಷಗಳ ತನಕ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಕನಿಷ್ಠ 1000 ದಿಂದ ಹೂಡಿಕೆ ಪ್ರಾರಂಭಿಸಬಹುದಾಗಿದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಈ ಸ್ಕೀಮ್ ಹೊಂದಿಲ್ಲ. ಪ್ರಸ್ತುತ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ 7.7% ಬಡ್ಡಿ ದೊರೆಯುತ್ತಿದೆ. ಇದರಲ್ಲಿ ಸಿಂಗಲ್ ಖಾತೆಯನ್ನು ತೆರೆಯಬಹುದು ಮತ್ತು 3 ಜನ ವಯಸ್ಕರು ಸೇರಿ ಜಂಟಿ ಖಾತೆಯನ್ನಾದರೂ ತೆರೆಯಬಹುದು. ಅಪ್ರಾಪ್ತರ ಪರವಾಗಿ ಪೋಷಕರು ಖಾತೆಯನ್ನು ಆರಂಭಿಸಬಹುದು.

ಇದನ್ನು ಓದಿ: SBI, HDFC, IDBI ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿರುವ ಸ್ಪೆಷಲ್ FD ಸ್ಕೀಮ್ ಇವೆ, ಎಷ್ಟು ಬಡ್ಡಿ ಕೊಡುತ್ತಿದೆ ತಿಳಿಯಿರಿ

ನ್ಯಾಷನಲ್ ಸೇವಿಂಗಸ್ ಸರ್ಟಿಫಿಕೇಟ್ ಸ್ಕೀಮ್ ನಲ್ಲಿ ಹೂಡಿಕೆದಾರರಿಗೆ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ಪ್ರಯೋಜನ ಸಿಗುತ್ತದೆ. ವಾರ್ಷಿಕ ಗರಿಷ್ಟ 1.50 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಅಲ್ಲದೆ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ ನಂತರ ಅದರ ಮೇಲೆ ಬರುವ ಬಡ್ಡಿಯ ಮೇಲೆ TDS ಕಡಿತಗೊಳಿಸುವುದಿಲ್ಲ.

post office scheme if you deposit 3 lakh you will get income rs 20000
image source : indian post

ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ

ಇನ್ನು ಐದು ವರ್ಷ ಅವಧಿಯ ಮೇಲೆ ಬ್ಯಾಂಕುಗಳು ಎಷ್ಟು ಬಡ್ಡಿಯನ್ನು ನೀಡುತ್ತಿವೆ ಅನ್ನೋದನ್ನ ಹೋಲಿಕೆ ಮಾಡಿ ನೋಡುವುದಾದರೆ, ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಐದು ವರ್ಷ ಕಾಲಾವಧಿಯ ಫಿಕ್ಸೆಡ್ ಡೆಪಾಸಿಟ್ ಮೇಲೆ 6.50 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಐದು ವರ್ಷ ಅವಧಿಯ ಫಿಕ್ಸೆಡ್ ಡೆಪಾಸಿಟ್ (FD) ಮೇಲೆ 6.50 ರಷ್ಟು ಬಡ್ಡಿಯನ್ನು ನೀಡುತ್ತಿದ್ದರೆ, HDFC ಬ್ಯಾಂಕ್ ಇದೇ ಅವಧಿಗೆ 7% ಬಡ್ಡಿಯನ್ನು ನೀಡುತ್ತಿದೆ. ಇನ್ನು ಬ್ಯಾಂಕ್ ಆಫ್ ಇಂಡಿಯಾ ಐದು ವರ್ಷ ಅವಧಿಯ ಫಿಕ್ಸೆಡ್ ಡೆಪಾಸಿಟ್ ಮೇಲೆ 6.50 ರಷ್ಟು ಬಡ್ಡಿಯನ್ನು ಒದಗಿಸುತ್ತಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಸ್ಕೀಮ್ 7.7% ಬಡ್ಡಿಯನ್ನು ಒದಗಿಸುತ್ತಿದೆ.

ಇದನ್ನು ಓದಿ: ಏರ್ಟೆಲ್ ಮತ್ತು ಜಿಯೋದ ಈ ನಿರ್ಧಾರ ಚಾಲ್ತಿಗೆ ಬಂದರೆ ಗ್ರಾಹಕರಿಗೆ ಹೊರೆ, ಸ್ಟಾಕ್ ಬ್ರೋಕಿಂಗ್ ವರದಿ ನಿಜವಾಗುತ್ತಾ

Leave A Reply

Your email address will not be published.