Ultimate magazine theme for WordPress.

Jio Tv Plans: ಜಿಯೋ ಟಿವಿ ಪ್ರೀಮಿಯಂ ಚಂದಾದಾರಿಕೆ ಜೊತೆ 14 ಒಟಿಟಿ ಸಿಗುವ 3 ಹೊಸ ಪ್ಲಾನ್ ಪರಿಚಯಿಸಿದ ಜಿಯೋ, ಅವುಗಳ ಬೆಲೆ ಹೀಗಿವೆ

Jio Tv Plans:

0

Jio Tv Plans: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಜಿಯೋ ಟಿವಿ (Jio TV) ಪ್ರೀಮಿಯಂ ಚಂದಾದಾರಿಕೆ (Premium Subscription) ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಗಳನ್ನು (Recharge Plans) ಪ್ರಕಟಿಸಿದೆ. ಒಂದೇ ಪ್ಲಾನ್ ನಲ್ಲಿ ಗರಿಷ್ಠ 14 ವಿಭಿನ್ನ ಒಟಟಿ ( OTT) ಆ್ಯಪ್ಸ್ ಗೆ ಆಕ್ಸಸ್ ಕೊಟ್ಟಿದೆ.

ಜಿಯೋ ಟೆಲಿಕಾಂ ಜಿಯೋ ಟಿವಿ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ (Jio TV Premium Subscription) ಹೊಂದಿರುವ 3 ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ತಂದಿದೆ. ಇದರಲ್ಲಿ ತಿಂಗಳಿಗೆ, ಮೂರು ತಿಂಗಳಿಗೆ, ವಾರ್ಷಿಕ ಪ್ಲಾನ್ ಗಳು ಇವೆ. ತಿಂಗಳ ಪ್ಲಾನ್ ರೂ.398 ರೊಂದಿಗೆ ಪ್ರಾರಂಭವಾಗುತ್ತೆ. ಇದರಲ್ಲಿ ಅನ್ಲಿಮಿಟೆಡ್ ಡೇಟಾ, ವಾಯ್ಸ್ ಕಾಲಿಂಗ್, ಎಸ್ಎಂಎಸ್ ಸೌಲಭ್ಯಗಳು ನೀಡುತ್ತಿದೆ.

ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನೊಂದಿಗೆ ವಾಯ್ಸ್ ಕಾಲ್, ಎಸ್ಎಂಎಸ್ ಜೊತೆ ಬಳಕೆದಾರರಿಗೆ ಜಿಯೋ ಟಿವಿ ಆ್ಯಪ್ ಮೂಲಕ Disney Plus Hotstar, Amazon Prime ವಿಡಿಯೋ, Sony Liv, Zee5 ಸೇರಿದಂತೆ 15 ಕ್ಕೂ ಹೆಚ್ಚು ಒಟಿಟಿಗಳನ್ನು ಬಳಸಬಹುದು. ಡಿಸೆಂಬರ್  15 ರಿಂದ ಜಿಯೋ ಕಸ್ಟಮರ್ಸ್ಗೆ ಹೊಸ  ಪ್ಲಾನ್ ದೊರೆಯಲಿದೆ. ಎಲ್ಲಾ ಪ್ಲಾನ್ ಗಳು 100 ಎಸ್ಎಂಎಸ್ ಜೊತೆ ಪ್ರತಿದಿನ 2GB ಡೇಟಾವನ್ನು ನೀಡುತ್ತಿದೆ.

ಇದನ್ನು ಓದಿ: UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ರೂ 62 ಸಾವಿರ

ಜಿಯೋ ಟಿವಿ ಪ್ರೀಮಿಯಂ ಪ್ಲಾನ್ ಬೆಲೆ ಎಷ್ಟು..?

ರಿಲಯನ್ಸ್ ಜಿಯೋ ಟೆಲಿಕಾಂ ಜಿಯೋ ಟಿವಿ ಚಂದಾದಾರಿಕೆ ಹೊಂದಿರುವ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್ಗಳನ್ನು (New Prepaid Plans) ತಂದಿದೆ. ರೂ. 398, ರೂ. 1198, ರೂ. 4498 ಈ ಎಲ್ಲಾ ಪ್ಲಾನ್ ಗಳು ಡಿಸೆಂಬರ್ 15, 2023 ರಿಂದ ಜಾರಿಗೆ ಬರಲಿದೆ.

reliance jio gave good news to crores of users will get free 5g service
Photo Credit : Original Source

ಜಿಯೋ ಟಿವಿ ಪ್ರೀಮಿಯಂ ಪ್ಲಾನ್ ಚಂದಾದಾರಿಕೆಯಲ್ಲಿ ಏನೇನು ಸಿಗುತ್ತದೆ

ರಿಲಯನ್ಸ್ ಜಿಯೋ ಟೆಲಿಕಾಂ ಜಿಯೋ ಟಿವಿ ಚಂದಾದಾರಿಕೆ ಮೂಲಕ 14 ಒಟಿಟಿ ಪ್ಲಾಟ್ ಫಾರ್ಮ್ ಗಳನ್ನು ಬಳಸುವ ಅವಕಾಶ ಕಲ್ಪಿಸುತ್ತದೆ. ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ನಿ ಹಾಟ್ ಸ್ಟಾರ್ ಪ್ಲಸ್, Amazon Prime ವಿಡಿಯೋ, Sony Liv, Zee5, Lionsgate Play, Discovery Plus, Planet Marathi, Chaupal, EpicOn, and Kanccha Lannka ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಿಬಹುದು, ಬಳಕೆದಾರರು ತಮ್ಮ ಮೊಬೈಲ್ ಮೂಲಕ ಈ ಪ್ಲಾಟ್ ಫಾರ್ಮ್ ಗಳಿಗೆ ಸೈನ್ಇನ್ ಆಗಬಹುದು.

ಇದನ್ನು ಓದಿ: Aadhaar News: ಆಧಾರ್ ವಿಷಯದಲ್ಲಿ ಸರ್ಕಾರ ಸೀರಿಯಸ್ ವಾರ್ನಿಂಗ್, ಇಂತಹ ಕೆಲಸ ಮಾಡಿದರೆ 50 ಸಾವಿರ ಫೈನ್

ಸೂಚನೆ: ಡಿಸ್ನಿಹಾಟ್ ಸ್ಟಾರ್ ಪ್ಲಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ವರ್ಷ್ ಮಾತ್ರ ಆಕ್ಸಸ್ ಮಾಡಬಹುದು

ರೀಚಾರ್ಜ್ ಪ್ಲಾನ್ ಗಳ ವಿವರ ಹೀಗಿದೆ  

ರೂ. 398 ರ ರೀಚಾರ್ಜ್ ಪ್ಲಾನ್ : ಇದು ತಿಂಗಳ ಪ್ಲಾನ್ ಆಗಿದೆ. ಇದರಲ್ಲಿ ಪ್ರತಿದಿನಕ್ಕೆ 2 GB ಡೇಟಾ ದೊರೆಯಲಿದ್ದು ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್, ಪ್ರತಿದಿನಕ್ಕೆ 100 SMS ಮತ್ತು ಜಿಯೋ ಟಿವಿ ಪ್ರಿಮೀಯಂ ಚಂದಾದಾರಿಕೆ ದೊರೆಯಲಿದೆ (12 OTT). ಈ ಪ್ಲಾನ್ ಒಟ್ಟು 28  ದಿನಗಳ ವ್ಯಾಲಿಟಿಡಿಯನ್ನು ಹೊಂದಿದೆ

ರೂ. 1198 ರ ರೀಚಾರ್ಜ್ ಪ್ಲಾನ್ : ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಅಂದರೆ ಇದು ಮೂರು ತಿಂಗಳ ಪ್ಲಾನ್ ಆಗಿದೆ. ಈ ಪ್ಲಾನ್ ನಲ್ಲೂ ಗ್ರಾಹಕರು 2 GB ಡೇಟಾ ಪಡೆಯಲಿದ್ದಾರೆ. ಇದರೊಂದಿಗೆ  ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್, ಪ್ರತಿದಿನಕ್ಕೆ 100 SMS ಮತ್ತು ಜಿಯೋ ಟಿವಿ ಪ್ರಿಮೀಯಂ ಚಂದಾದಾರಿಕೆ ದೊರೆಯಲಿದೆ (14 OTT)

ರೂ. 4498 ರ ರೀಚಾರ್ಜ್ ಪ್ಲಾನ್ : ಇದು ಒಂದು ವರ್ಷದ ಪ್ಲಾನ್ ಆಗಿದೆ. ಇದರಲ್ಲೂ ಪ್ರತಿದಿನಕ್ಕೆ 2GB ಡೇಟಾ ದೊರೆಯಲಿದೆ. ಇದರೊಂದಿಗೆ  ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್, ಪ್ರತಿದಿನಕ್ಕೆ 100 SMS ಮತ್ತು ಜಿಯೋ ಟಿವಿ ಪ್ರಿಮೀಯಂ ಚಂದಾದಾರಿಕೆ ದೊರೆಯಲಿದೆ (14 OTT)

ಇದನ್ನು ಓದಿ: Samsung Mobile Users: ಸ್ಯಾಮ್ಸಂಗ್ ಫೋನ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ, ಕೂಡಲೇ ಈ ಕೆಲಸವನ್ನು ಮಾಡುವಂತೆ ಸೂಚನೆ

Leave A Reply

Your email address will not be published.