Ultimate magazine theme for WordPress.

ಸ್ಯಾಮ್ಸಂಗ್ ಗ್ಯಾಲಕ್ಸಿ S24 FE ಭಾರತದಲ್ಲಿ ಬಿಡುಗಡೆ, ಪ್ರಿ ಬುಕ್ಕಿಂಗ್ ಪ್ರಾರಂಭ, ಬೆಲೆ ಇತರ ವಿವರ

ಈ ಸ್ಮಾರ್ಟ್ ಫೋನ್ 6.7 ಇಂಚಿನ FHD+ ಡೈನಾಮಿಕ್ ಅಮೋಲೆಡ್ 2X ಡಿಸ್ ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 1900 ಗರಿಷ್ಟ ನಿಟ್ಸ್ ಹೊಂದಿದೆ.

0

ಸ್ಯಾಮ್ಸಂಗ್ ನಿಂದ ಗ್ಯಾಲಕ್ಸಿ S24 ಸರಣಿಯಲ್ಲಿ ಫ್ಯಾನ್ ಎಡಿಷನ್ ಸ್ಮಾರ್ಟ್ ಫೋನ್ ಲಾಂಚ್ ಆಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ”Samsung Galaxy S24 FE” ಭಾರತದ ಮಾರುಕಟ್ಟೆಗೆ ಎಂಟ್ರಿಕೊಂಡಿದೆ. ಈ ವಿಷಯವನ್ನು ಕಂಪನಿಯು ತನ್ನ ಸೋಷಿಯಲ್ ಮೀಡಿಯಾ X ನಲ್ಲಿ ಬಹಿರಂಗಪಡಿಸಿದೆ ಮತ್ತು ಈ ಫೋನಿನ ಪ್ರಿ ಬುಕ್ಕಿಂಗ್ ಕೂಡ ಆರಂಭಿಸಿಬಿಟ್ಟಿದೆ.

ಈಗ ಬಿಡುಗಡೆಯಾಗಿರುವ ಸ್ಮಾರ್ಟ್ ಫೋನ್ ವಿನ್ಯಾಸದಲ್ಲಿ ”Samsung Galaxy S24” ಸ್ಮಾರ್ಟ್ ಫೋನ್ ನಂತಯೇ ಇದೆ. ಇದು Exynos 2400e ಚಿಪ್ಸೆಟ್ ಮತ್ತು 4,700mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಗ್ಯಾಲಕ್ಸಿ ಎಐ ನೊಂದಿಗೆ ಹಲವು ಆಕರ್ಷಕ ಫೀಚರ್ ಗಳನ್ನು ಹೊಂದಿದೆ. ಹಾಗಿದ್ದರೆ ”Samsung Galaxy S24 FE” ಕುರಿತು ತಿಳಿಯೋಣ

kannadatips default image
image source: original source

Samsung Galaxy S24 FE ಬೆಲೆ ಮತ್ತು ಲಭ್ಯತೆ

ಸ್ಯಾಮ್ಸಂಗ್ ಗ್ಯಾಲಕ್ಸಿ S24 FE ಎರಡು ಸ್ಟೋರೇಜ್ ವೇರಿಯೆಂಟ್ ಗಳಲ್ಲಿ ಬರುತ್ತದೆ. 8GB/128GB ಮತ್ತು 8GB/256GB ಸ್ಟೋರೇಜ್ ನಲ್ಲಿ ಲಭ್ಯವಿದೆ. ಈ ಫೋನ್ USD 699.99 (ಸುಮಾರು ರೂ. 54,360) ಮತ್ತು ಟಾಪ್ ವೇರಿಯೆಂಟ್ USD 749.99 ( ಸುಮಾರು 59,378) ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ US ಮಾರ್ಕೆಟ್ ನಲ್ಲಿ ಪ್ರಿ-ಬಕ್ಕಿಂಗ್ ಆರಂಭವಾಗಿದೆ. ಹಾಗು ಬ್ಲೂ, ಗ್ರಾಫೈಟ್, ಗ್ರೆ ಮತ್ತು ಮಿಂಟ್ ಬಣ್ಣಗಳಲ್ಲಿ ಬರುತ್ತದೆ. ಇದು ಅಕ್ಟೋಬರ್ 3 ರಿಂದ ಖರೀದಿಗೆ ದೊರೆಯುತ್ತದೆ

ಆದರೆ ಕಂಪನಿಯು ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಬೆಲೆ ಮತ್ತು ಸೇಲ್ ವಿವರಗಳನ್ನು ಬಹಿರಂಗಪಡಿಸಿಲ್ಲ ಆದರೆ ಸ್ಯಾಮ್ಸಂಗ್ ಅಧಿಕೃತ ಇಂಡಿಯಾ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಇದನ್ನು ಓದಿ: Xiaomi 14T ಸರಣಿ ಮಾರುಕಟ್ಟೆಗೆ ಬಿಡುಗಡೆ, ದರ, ಸ್ಪೆಸಿಫಿಕೇಶನ್ ವಿವರ ಹೀಗಿದೆ

Samsung Galaxy S24 FE ಸ್ಪೆಸಿಫಿಕೇಶನ್ಸ್

ಈ ಸ್ಮಾರ್ಟ್ ಫೋನ್ 6.7 ಇಂಚಿನ FHD+ ಡೈನಾಮಿಕ್ ಅಮೋಲೆಡ್ 2X ಡಿಸ್ ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 1900 ಗರಿಷ್ಟ ನಿಟ್ಸ್ ಹೊಂದಿದೆ. ಡಿಸ್ ಪ್ಲೇ ಮುಂಭಾಗದ ಮತ್ತು ಹಿಂಭಾಗದ ಪ್ಯಾನೆಲ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿದೆ. ಹೆಚ್ಚುವರಿಯಾಗಿ IP68 ರೇಟಿಂಗ್ ಮತ್ತು ಅಲ್ಯೂಮಿನಿಯಂ ಫ್ರೇಮ್ ನೊಂದಿಗೆ ಬರುತ್ತದೆ

ಈ ಸ್ಮಾರ್ಟ್ ಫೋನ್ Exynos 2400e ಪ್ರೊಸೆಸರ್ ಮತ್ತು ಗರಿಷ್ಟ 8GB RAM ಮತ್ತು 256GB ತನಕ ಸ್ಟೋರೇಜ್ ನೀಡುತ್ತದೆ. ಇದು ಆಂಡ್ರಾಯ್ಡ್ 14 ಆಧಾರಿತ OneUI 6.o ಮೂಲಕ ಕೆಲಸ ಮಾಡುತ್ತದೆ. ಗ್ಯಾಲಕ್ಸಿ S24 ಸರಣಿಯ ಇತರ ಮಾಡೆಲ್ ಗಳಂತೆಯೇ AI ಫೀಚರ್ ಗಳನ್ನು ಹೊಂದಿದೆ.

Samsung Galaxy S24 FE
Representative Image

ಕ್ಯಾಮೆರಾದ ವಿಷಯದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ 50MP ಪ್ರಧಾನ ಕ್ಯಾಮೆರಾ ಮತ್ತು 3X ಜೂಮ್ ಜೊತೆಗೆ OIS ಸಪೋರ್ಟ್ ನೊಂದಿಗೆ 8MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ 12MP ಅಲ್ಟ್ರಾ ವೈಡ್ ಸೆನ್ಸರ್ ಅನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 10MP ಕ್ಯಾಮೆರಾವನ್ನು ಹೊಂದಿದೆ.

ಈ ಹ್ಯಾಂಡ್ ಸೆಟ್ ವೈರ್ ಮತ್ತು ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ವಿಷಯದಲ್ಲಿ 5G, 4G, Wi-Fi 6E, ಬ್ಲೂಟೂತ್ 5.3 ಮತ್ತು USB ಟೈಪ್ ಸಿ ಪೋರ್ಟ್ ಹೊಂದಿದೆ.

ಇದನ್ನು ಓದಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಈ ಸ್ಮಾರ್ಟ್ ಫೋನ್ ಗಳ ಮೇಲೆ ಕಣ್ಣಾಡಿಸಿ, ಹೆಚ್ಚು ಡಿಸ್ಕೌಂಟ್ ಹೊಂದಿರುವ ಬೆಸ್ಟ್ ಫೋನ್ ಗಳಿವು

Leave A Reply

Your email address will not be published.