Ultimate magazine theme for WordPress.

ಟೆಕ್ನೋದಿಂದ ಅಗ್ಗದ ದರಕ್ಕೆ 5G ಸ್ಮಾರ್ಟ್ ಫೋನ್, ಅಕ್ಟೋಬರ್ 7 ರಿಂದ ಮಾರಾಟವಾಗಲಿದೆ ಈ ಫೋನ್

ಕಂಪನಿಯು ಮಂಗಳವಾರವೇ ಭಾರತದ ಗ್ರಾಹಕರಿಗೆ ಈ ಸ್ಮಾರ್ಟ್ ಫೋನ್ ಪರಿಚಯಿಸುವುದರ ಜೊತೆಗೆ ಪ್ರಿ ಬುಕ್ಕಿಂಗ್ ಅನ್ನು ಆರಂಭಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಈ ಫೋನಿನ ಸೇಲ್ ಆರಂಭಿಸಲಿದೆ. 

0

ಟೆಕ್ನೋ ಪಾಪ್ 9 5G ಸ್ಮಾರ್ಟ್ ಫೋನ್ ಭಾರತದಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಐಫೋನ್ ನಂತಯೇ ಹೊರ ವಿನ್ಯಾಸವನ್ನು ಹೊಂದಿರುವ ಈ ಫೋನ್ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುವುದು ಮತ್ತೊಂದು ವಿಶೇಷವಾಗಿದೆ. ಕಂಪನಿಯು ಈ ಸ್ಮಾರ್ಟ್ ಫೋನ್ ಗೆ 48MP ಪ್ರೈಮರಿ ಕ್ಯಾಮೆರಾ ಮತ್ತು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್ಸೆಟ್ ಅನ್ನು ಅಳವಡಿಸಿದೆ.

ಕಂಪನಿಯು ಮಂಗಳವಾರವೇ ಭಾರತದ ಗ್ರಾಹಕರಿಗೆ ಈ ಸ್ಮಾರ್ಟ್ ಫೋನ್ ಪರಿಚಯಿಸುವುದರ ಜೊತೆಗೆ ಪ್ರಿ ಬುಕ್ಕಿಂಗ್ ಅನ್ನು ಆರಂಭಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಈ ಫೋನಿನ ಸೇಲ್ ಆರಂಭಿಸಲಿದೆ.

kannadatips default image
image source: original source

ಭಾರತದಲ್ಲಿ ಟೆಕ್ನೋ ಪಾಪ್ 9 5G ಬೆಲೆ ಮತ್ತು ಮಾರಾಟ

ಕಂಪನಿಯು ಈ ಸ್ಮಾರ್ಟ್ ಫೋನ್ ಅನ್ನು ಎರಡು ವೇರಿಯೆಂಟ್ ಗಳಲ್ಲಿ ಪರಿಚಯಿಸಿದೆ. 4GB/64GB ಸ್ಟೋರೇಜ್ ಇರುವ ಸ್ಮಾರ್ಟ್ ಫೋನ್ ರೂ. 9,499 ಬೆಲೆಯನ್ನು ಹೊಂದಿದ್ದರೆ ಮತ್ತೊಂದು 128GB ಸ್ಟೋರೇಜ್ ಇರುವ ರೂಪಾಂತರವು 9,999 ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ.

ಖರೀದಿದಾರರು ಈ ಸ್ಮಾರ್ಟ್ ಫೋನ್ ರೂ. 499 ಟೋಕನ್ ಅಡ್ವಾಸ್ ನೀಡುವುದರ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು. ಅಮೆಜಾನ್ ನಲ್ಲಿ ಪ್ರಿ ಬುಕ್ಕಿಂಗ್ ಆರಂಭವಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ಅನ್ನು ಕಂಪನಿಯು ಅಕ್ಟೋಬರ್ 7 ರಿಂದ ಸೇಲ್ ಮಾಡಲಿದೆ. ಪ್ರಸ್ತುತ ಈ ಸ್ಮಾರ್ಟ್ ಫೋನ್ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅರೋರಾ ಕ್ಲೌಡ್, ಅಜುರೆ ಸ್ಕೈ ಮತ್ತು ಮಿಡ್ ನೈಟ್ ಶಾಡೋ ಬಣ್ಣಗಳಲ್ಲಿ ಬರಲಿದೆ. ಇನ್ನು ಕಂಪನಿಯು ಫೋನ್ ಜೊತೆಗೆ ಕಾಂಪ್ಲಿಮೆಂಟರಿಯಾಗಿ ಎರಡು ಫೋನ್ ಸ್ಕ್ರೀನ್ ಗಳನ್ನು ನೀಡುವುದಾಗಿ ತಿಳಿಸಿದೆ.

ಇದನ್ನು ಓದಿ: Oppo K12x 5G ಫೋನಿನಲ್ಲಿ ಹೊಸ ವೆರಿಯೆಂಟ್ ಬಿಡುಗಡೆ, ಸೇಲ್ ಮತ್ತು ಬೆಲೆ ವಿವರ ಇಲ್ಲಿದೆ

ಟೆಕ್ನೋ ಪಾಪ್ 9 5G ಸ್ಪೆಸಿಫಿಕೇಶನ್ಸ್ 

ಈ ಟೆಕ್ನೋ ಪಾಪ್ 9 5G ಸ್ಮಾರ್ಟ್ ಫೋನ್ ಡ್ಯುಯಲ್ ಸಿಮ್, 120Hz ರಿಫ್ರೆಶ್ ರೇಟ್ ನೊಂದಿಗೆ LDC ಸ್ಕ್ರೀನ್ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮನ್ಸಿಟಿ 6300 ಜೊತೆಗೆ 4GB RAM ಮತ್ತು 128GB ತನಕ ಆನ್ ಬೋರ್ಡ್ ಸ್ಟೋರೇಜ್ ಅನ್ನು ಕೊಡುತ್ತದೆ.

ಕ್ಯಾಮೆರಾ ವಿಷಯಕ್ಕೆ ಬಂದರೆ ಈ ಸ್ಮಾರ್ಟ್ ಫೋನ್ 48MP ಸೋನಿ IMX582 ಹಿಂಬದಿಯ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಶಾಶ್ ಹೊಂದಿದೆ. ಇನ್ನು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಹೊಂದಿದೆ. ಇದು ಡಾಲ್ಬಿ ಅಟ್ಮಾಸ್ನೊಂದಿಗೆ ಡ್ಯುಯಲ್ ಸ್ಪೀಕರ್ ಗಳನ್ನು ಹೊಂದಿದ್ದು ಗುಣಮಟ್ಟ ಆಡಿಯೋ ಅನುಭವನ್ನು ನೀಡುತ್ತದೆ.

Tecno Pop 9 5G
Representative Image

ಇನ್ನು ಈ ಸ್ಮಾರ್ಟ್ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 18W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಇನ್ ಫ್ರಾರೆಡ್ ಟ್ರಾನ್ಸ್ ಮಿಟರ್ ಮತ್ತು ಸ್ಪ್ಲಾಶ್ ನಿರೋಧಕಕ್ಕಾಗಿ IP54 ರೇಟಿಂಗ್ ಪಡೆದುಕೊಂಡಿದೆ. ಕಂಪನಿಯಿಂದ ಈ ಸೆಗ್ಮೆಂಟ್ ನಲ್ಲಿ NFC ಫೀಚರ್ ಹೊಂದಿರುವ ಮೊದಲ ಫೋನ್ ಇದಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ. ನೀವೆನಾದರೂ ಬಜೆಟ್ ಬೆಲೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಆಲೋಚನೆಯಲ್ಲಿದ್ದರೆ ಇದನ್ನು ನಿಮ್ಮ ಗಮನದಲ್ಲಿಟ್ಟುಕೊಂಡು ಪರಿಶೀಲನೆ ಮಾಡಬಹುದು.

ಇದನ್ನು ಓದಿ: ಒನ್ ಪ್ಲಸ್ ನ ಈ ಫೋನಿನ ಮೇಲೆ 3000 ಡಿಸ್ಕೌಂಟ್, ಸೇಲ್ ಸಮಯದಲ್ಲಿ ಖರೀದಿಸಿದ್ರೆ ವೈರ್ಲೆಸ್ ಹೆಡ್ ಫೋನ್ ಉಚಿತ

Leave A Reply

Your email address will not be published.