Ultimate magazine theme for WordPress.

UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ರೂ 62 ಸಾವಿರ

UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಸಂಸ್ಥೆಯಿಂದ 300 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

5

UIIC Assistant Jobs 2023:  ಪದವಿ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಚೆನ್ನೈ ಮೂಲದ ಸಾರ್ವಜನಿಕ ರಂಗ ವಿಮಾ ಸಂಸ್ಥೆ ಆಗಿರುವ ”ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ” (United India Insurance Co limited) 300 ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಷನ್ ಹೊರಡಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶಾದ್ಯಂತ ಇರುವ ಯಾವುದೇ ಕಛೇರಿಗೆ ಬೇಕಾದರೂ ನಿಯೋಜಿಸಬಹುದು. ಹೀಗಾಗಿ ಅಭ್ಯರ್ಥಿಗಳು ಮಾನಸಿಕವಾಗಿ ಎಲ್ಲಿಯಾದರೂ ಕೆಲಸ ಮಾಡಲು ಸಿದ್ದರಿರಬೇಕು

ಹುದ್ದೆಗಳ ವಿವರಗಳು

ಯುಆರ್-159 ಹುದ್ದೆಗಳು

ಓಬಿಸಿ- 55 ಹುದ್ದೆಗಳು

ಈಡ್ಬ್ಲೂಎಸ್- 30 ಹುದ್ದೆಗಳು

ಎಸ್ಸಿ- 30 ಹುದ್ದೆಗಳು

ಎಸ್ಟಿ- 26 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ-300

ಸೂಚನೆ: ಕರ್ನಾಟಕ ರಾಜ್ಯಕ್ಕೆ ಒಟ್ಟು 32 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ತಮಿಳುನಾಡು ರಾಜ್ಯದ ನಂತರ ಕರ್ನಾಟಕ್ಕೆ ಹೆಚ್ಚು ಹುದ್ದೆಗಳು ಮೀಸಲಿರಿಸಲಾಗಿದೆ.

ಅರ್ಹತೆಗಳು (Eligibility)

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಸಂಸ್ಥೆ ಆಹ್ವಾನಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಉತ್ತೀರ್ಣರಾಗಿರಬೇಕು.

ವಯೋಮಿತಿ ( Age Limit)

ಅಭ್ಯರ್ಥಿಗಳ ವಯಸ್ಸು 2023 ಸೆಪ್ಟೆಂಬರ್ 30 ಕ್ಕೆ 21 ರಿಂದ 30 ವರ್ಷದ ಮಧ್ಯದಲ್ಲಿ ಇರಬೇಕು

ನಿಯಮಗಳ ಪ್ರಕಾರ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷ ವಯಸ್ಸಿನ ಸಡಿಲಿಕೆ ನೀಡಿಲಾಗಿದೆ.

ಅರ್ಜಿ ಶುಲ್ಕ (Application Fee) 

ಜನರಲ್ ಮತ್ತು ಓಬಿಸಿ ಅಭ್ಯರ್ಥಿಗಳು 1000 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಬೇಕಾಗುತ್ತೆ. ಹೆಚ್ಚುವರಿಯಾಗಿ ಜಿಎಸ್ಟಿ ಕೂಡ ವಿಧಿಸಲಾಗುತ್ತೆ

ಎಸ್ಸಿ.ಎಸ್ಟಿ, ವಿಕಲಚೇತನ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ.

ಆಯ್ಕೆ ವಿಧಾನ (Selection Process) 

ಅಭ್ಯರ್ಥಿಗಳು ಮೊದಲು ಆನ್ಲೈನ್ ಪರೀಕ್ಷೆಯಲ್ಲಿ ಭಾಗವಹಿಸಬೇಕಾಗುತ್ತೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ರೀಜಿನಲ್ ಲಾಂಗ್ವೇಜ್ ಪರೀಕ್ಷೆ ಇರುತ್ತೆ. ಇದರಲ್ಲಿ ಕ್ವಾಲಿಫೈ ಆದ ಆಭ್ಯರ್ಥಿಗಳ ದಾಖಲೆಗಳ ಪರಿಶೀಲನೆ, ಮೆಡಿಕಲ್ ಎಕ್ಸಾಮಿನೇಷನ್ ಮಾಡಿದ ನಂತರ ಅಸಿಸ್ಟೆಂಟ್ ಹುದ್ದೆ ಆಯ್ಕೆ ಮಾಡಲಾಗುತ್ತೆ

kannadatips default image
image source: original source

ವೇತನ ( Salary)

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಸಂಸ್ಥೆ ಆಹ್ವಾನಿಸಿರುವ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 22,405 ರಿಂದ ರೂ. 62,265 ವರೆಗೂ ವೇತನ ದೊರೆಯುತ್ತದೆ.

ಅರ್ಜಿ ಸಲ್ಲಿಕೆ ವಿಧಾನ (Application Process)

ಅಭ್ಯರ್ಥಿಗಳು ಮೊದಲಿಗೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಅಧಿಕೃತ ವೆಬ್ಸೈಟ್ https://uiic.co.in/ ಭೇಟಿ ನೀಡಬೇಕು

UIIC Assistant Apply online link ಮೇಲಿ ಕ್ಲಿಕ್ ಮಾಡಬೇಕು

ಅರ್ಜಿ ಸಲ್ಲಿಸುವ ಫಾರ್ಮ್ ನಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತು ವಿದ್ಯಾರ್ಹತೆ ಎಲ್ಲವನ್ನು ಸರಿಯಾಗಿ ನಮೂದಿಸಬೇಕು

ಅಗತ್ಯವಿರುವ ದಾಖಲೆಗಳನ್ನ ಅಪ್ಲೋಡ್ ಮಾಡಬೇಕಾಗುತ್ತೆ

ಆನ್ಲೈನ್ ನಲ್ಲಿಯೇ ಅರ್ಜಿ ಶುಲ್ಕವನ್ನು ಕಟ್ಟಬೇಕು

ಎಲ್ಲಾ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಂತರ ಅಪ್ಲಿಕೇಶನ್ ಸಲ್ಲಿಸಬೇಕು

ನಂತರ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳುವುದುನ್ನು ಮರೆಯಬಾರದು

ಮುಖ್ಯವಾದ ದಿನಾಂಕಗಳು ( Dates)

ಆನ್ಲೈನ್ ರಿಜಿಸ್ಟರ್ 16 ಡಿಸೆಂಬರ್ 2023 ರಿಂದ ಪ್ರಾರಂಭವಾಗುತ್ತೆ

ಆನ್ಲೈನ್ ರಿಜಿಸ್ಟರ್ ಕೊನೆಯದಿನಾಂಕ 6 ಜನವರಿ 2023

ಸೂಚನೆ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನೋಟಿಫಿಕೇಷನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮುಂದುವರೆಯಿರಿ.
5 Comments
  1. […] ಇದನ್ನು ಓದಿ: UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ… […]

  2. […] ಇದನ್ನು ಓದಿ: UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ… […]

  3. […] ಇದನ್ನು ಓದಿ: UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ… […]

  4. […] ಇದನ್ನು ಓದಿ: UIIC Assistant Jobs 2023: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ… […]

Leave A Reply

Your email address will not be published.