Ultimate magazine theme for WordPress.

ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆಗೆ ಮೂಹೂರ್ತ ಫಿಕ್ಸ್, ಮಹತ್ವದ ಸುಳಿವು ಕೊಟ್ಟ ಶಿವರಾಜ್ ಸಿಂಗ್ ಚೌಹಾಣ್

ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಣಿಸಿಗೆ ಭೇಟಿ ನೀಡುವ ಸಂದರ್ಭದಲ್ಲಿ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

1

ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುವ ರೈತರಿಗೆ ಮಳೆ, ಬೆಲೆ ಕೈಕೊಟ್ಟಾಗ ನೆರವಿಗೆ ಬರಲೆಂದು ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಅಡಿಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರದಂತೆ ವರ್ಷಕ್ಕೆ 6 ಸಾವಿರ ನೆರವು ಸಿಗುವಂತೆ ಕೇಂದ್ರ ಸರ್ಕಾರ ಮಾಡುತ್ತಿದೆ.

ಈ ಯೋಜನೆಯ ಫಲಾನುಭವಿಗಳು ಈಗಾಗಲೇ 16 ಕಂತಿನ ಹಣವನ್ನು ಸ್ವೀಕರಿಸಿದ್ದಾರೆ. ಇದೀಗ 17ನೇ ಕಂತಿನ ಹಣ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ಹಾಗಿದ್ದರೆ 17ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತೆ ಅನ್ನೋದನ್ನ ತಿಳಿಯೋಣ ಬನ್ನಿ

kannadatips default image
image source: original source

ಯಾವಾಗ ಬಿಡುಗಡೆಯಾಗುತ್ತೆ 17ನೇ ಕಂತಿನ ಹಣ  

ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರು ಮೊದಲ ದಿನವೇ ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆಯ ಕಡತಕ್ಕೆ ಸಹಿಹಾಕಿದ್ದಾರೆ. ಮೋದಿಯ ಈ ಕಾರ್ಯದ ಬೆನ್ನಲ್ಲೆ 17 ನೇ ಕಂತಿನ ಹಣ ಬಿಡುಗಡೆಯ ವಿಷಯ ಭಾರೀ ಚರ್ಚೆಗೆ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳು 17ನೇ ಕಂತಿನ ಹಣ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇವರಿಗೆ ಖುಷಿ ಕೊಡುವ ಸುದ್ದಿಯೊಂದನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಣಿಸಿಗೆ ಭೇಟಿ ನೀಡುವ ಸಂದರ್ಭದಲ್ಲಿ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಜೂನ್ 18 ರಂದು ಅಥವಾ 19 ರಂದು ಪ್ರಧಾನಿ ಮೋದಿ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು ಜೂನ್ 18 ರಂದು ಬಹುತೇಕ ಹಣ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನು ಓದಿ: ಹೂಡಿಕೆದಾರರಿಗೆ 8 ರಷ್ಟು ಬಡ್ಡಿದರ ಕೊಡುತ್ತಿದೆ ಈ ಬ್ಯಾಂಕ್, ಜೂನ್ 1 ರಿಂದ ಜಾರಿಗೆ ಬಂದ ಹೊಸ ಬಡ್ಡಿದರ ಹೀಗಿದೆ

9.3 ಕೋಟಿ ರೈತರ ಖಾತೆಗೆ ಜಮಾ ಆಗಲಿದೆ ಹಣ

ಪಿಎಂ ಕಿಸಾನ್ 16ನೇ ಕಂತಿನ ಹಣವನ್ನು  2024 ಫೆಬ್ರವರಿ 28 ರಂದು ನರೇಂದ್ರ ಮೋದಿಯುವರು ಮಹಾರಾಷ್ಟ್ರದ ಯುವತ್ಮಾಲ್ ನಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿದ್ದರು. ಈ ಮೂಲಕ 9.3 ಕೋಟಿಗೂ ಅಧಿಕ ಮಂದಿ ಫಲಾನುಭವಿ ರೈತರುಗಳ ಖಾತೆಗೆ ಒಟ್ಟು 21,000 ಕೋಟಿ ಜಮಾ ಮಾಡಿತ್ತು. ಶೀಘ್ರದಲ್ಲೇ 17ನೇ ಕಂತಿನ 20 ಸಾವಿರ ಕೋಟಿ ಫಲಾನುಭವಿಗಳ ಖಾತೆ ನೆರ ನಗದು ವರ್ಗಾವಣೆ ಮೂಲಕ ಸಂದಾಯವಾಗಲಿದೆ. ಈ ಯೋಜನೆಯ ಬಗ್ಗೆ ಮಾತನಾಡಿರುವ ಮೋದಿ, ರೈತರ ಆರ್ಥಿಕ ಕಲ್ಯಾಣಕ್ಕೆ ನಾವು ಬದ್ಧರಾಗಿದ್ದೇವೆ ಅದಕ್ಕಾಗಿಯೇ ಅಧಿಕಾರವಹಿಸಿಕೊಂಡ ಬಳಿಕ ಕಡತಕ್ಕೆ ಸಹಿ ಹಾಕಿದ್ದೇನೆ ಎಂದರು

pm Kisan 15th instalment of rs 18000 crore released to more than 8 cored beneficiaries
Photo Credit : Original Source

ಹಣ ಜಮಾದ ಸ್ಟೇಟಸ್ ಚೆಕ್ ಮಾಡೋದು ಹೇಗೆ..?

ಪಿಎಂ ಕಿಸಾನ್ ಸಮ್ಮಾನ್ ನಿಧಿ 17 ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರ್ಕಾರ ಸಿದ್ದತೆ ನಡೆಸುತ್ತಿದೆ. ಪ್ರಧಾನಮಂತ್ರಿ ಮೋದಿ ಸಿಗ್ನೇಚರ್ ಹಾಕಿರುವುದರಿಂದ ಶೀಘ್ರದಲ್ಲೇ ಹಣ ವರ್ಗಾವಣೆ ಆಗಲಿದೆ. ಹಾಗಿದ್ದರೆ ಹಣ ಸಂದಾಯವಾದ ಬಳಿಕ ಚೆಕ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ

ಹಂತ 1: ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ https://pmkisan.gov.in/

ಹಂತ 2: ಪೇಜ್ ಓಪನ್ ಆದ ನಂತರ ಬಲಭಾಗದಲ್ಲಿ ”ಬೆನಿಫೀಶಿಯರ್ ಸ್ಟೇಟಸ್” ಮೇಲೆ ಕ್ಲಿಕ್ ಮಾಡಿ

ಹಂತ 3 : ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ಖಾತೆಯ ನಂಬರ್, ಕ್ಯಾಪ್ಚಾ ಕೋಡ್ ಎಂಟರ್ ಮಾಡಬೇಕಾಗುತ್ತೆ

ಹಂತ 4 : ನಂತರ ”ಗೆಟ್ ಸ್ಟೇಟಸ್” ಮೇಲೆ ಕ್ಲಿಕ್ ಮಾಡಬೇಕು

ಹಂತ 5 : ನಂತರ ನಿಮಗೆ ಡೀಟೈಲ್ಸ್ ಕಾಣಿಸುತ್ತದೆ.

Leave A Reply

Your email address will not be published.