Ultimate magazine theme for WordPress.

ಸ್ಲಿಮ್ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ವಿವೋದಿಂದ ಹೊಸ ಸ್ಮಾರ್ಟ್ ಫೋನ್, ಸಂಪೂರ್ಣ ಮಾಹಿತಿ ತಿಳಿಯಿರಿ

ಈ ಸ್ಮಾರ್ಟ್ ಫೋನ್ 6.77 ಇಂಚಿನ HD+ 3D ಕರ್ವ್ಡ್ AMOLED ಡಿಸ್ ಪ್ಲೇಯನ್ನು ಹೊಂದಿದೆ. ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ.

0

ವಿವೋ ಕಂಪನಿಯು ತನ್ನ V40 ಸರಣಿಯಲ್ಲಿ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು ”ವಿವೋ V40e” (Vivo V40e) ಎಂಬ ಹೆಸರಿನ ಹೊಸ ಸ್ಮಾರ್ಟ್ ಫೋನ್ ಅನ್ನು ಬುಧವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹಲವು ತಿಂಗಳುಗಳಿಂದ ಬಿಡುಗಡೆಯ ಕುರಿತು ಚರ್ಚೆಯಲ್ಲಿದ್ದ ಈ ಸ್ಮಾರ್ಟ್ ಫೋನ್ ಇಂದು ಬಿಡುಗಡೆಯಾಗುವ ಮೂಲಕ ಗ್ರಾಹಕರಲ್ಲಿ ಸಂತಸವನ್ನು ಮೂಡಿಸಿದೆ. ಆಗಸ್ಟ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ Vivo V40 ಮತ್ತು V40 Pro ಫೋನುಗಳ ಸರಣಿಗೆ ಇದೀಗ ವಿವೋ V40e ಸೇರಿಕೊಂಡಾಗಿದೆ.

ಸ್ಲಿಮ್ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ 120Hz AMOLED ಡಿಸ್ ಪ್ಲೇಯನ್ನು ಹೊಂದಿದ್ದು ಗರಿಷ್ಠ 256GB ಸ್ಟೋರೇಜ್ ಅನ್ನು ಹೊಂದಿದೆ. ಹಾಗಿದ್ದರೆ ಈ ಫೋನಿನ ಎಲ್ಲಾ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ

kannadatips default image
image source: original source

Vivo V40e ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್ ಫೋನ್ ಮಿಂಟ್ ಗ್ರೀನ್ ಮತ್ತು ರಾಯಲ್ ಬ್ರೋನ್ಸ್ಜ್ ಬಣ್ಣಗಳಲ್ಲಿ ಮತ್ತು 8GB/128GB ಮತ್ತು 8GB/256GB ಎಂಬ ಎರಡು ವೇರಿಯೆಂಟ್ ಗಳಲ್ಲಿ ಬರುತ್ತದೆ. 128GB ಸ್ಟೋರೇಜ್ ಹೊಂದಿರುವ ಮಾಡೆಲ್ 28,999 ಬೆಲೆಯನ್ನು ಪಡೆದಿದ್ದರೆ 256GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಮಾಡೆಲ್ 30,999 ಬೆಲೆಯನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್ ಫೋನ್ ಅಕ್ಟೋಬರ್ 2 ರಿಂದ ಫ್ಲಿಪ್ ಕಾರ್ಟ್ ಮತ್ತು ಇತರ ಪ್ರಮುಖ ಇ-ಕಾಮರ್ಸ್ ಹಾಗು ಸ್ಟೋರ್ ಗಳಲ್ಲಿ ಖರೀದಿಗೆ ದೊರೆಯುತ್ತದೆ. ಈಗಾಗಲೇ ಈ ಫೋನಿನ ಪ್ರಿ ಬುಕ್ಕಿಂಗ್ ತೆರೆಯಲಾಗಿದ್ದು ಫ್ಲಿಪ್ ಕಾರ್ಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಈ ಸ್ಮಾರ್ಟ್ ಫೋನ್ ಲಾಂಚಿಂಗ್ ಆಫರ್ ಭಾಗವಾಗಿ ಕಂಪನಿಯು HDFC ಮತ್ತು SBI ಕಾರ್ಡ್ ಮೂಲಕ ಖರೀದಿಸುವವರಿಗೆ ಶೇಕಡಾ 10% ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಎಕ್ಸ್ ಚೇಂಜ್ ಬೋನಸ್ ಸಹ ಲಭ್ಯವಿದೆ.

ಇದನ್ನು ಓದಿ: ಶಿಯೋಮಿ ದೀಪಾವಳಿ ಸೇಲ್ 2024, ಈ ಸ್ಮಾರ್ಟ್ ಫೋನುಗಳ ಮೇಲೆ ಸಖತ್ ರಿಯಾಯಿತಿ

Vivo V40e ಸ್ಪೆಸಿಫಿಕೇಶನ್ಸ್

ಈ ಸ್ಮಾರ್ಟ್ ಫೋನ್ 6.77 ಇಂಚಿನ HD+ 3D ಕರ್ವ್ಡ್ AMOLED ಡಿಸ್ ಪ್ಲೇಯನ್ನು ಹೊಂದಿದೆ. ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಈ ಡಿಸ್ ಪ್ಲೇಯು HDR10+ ಸಪೋರ್ಟ್ ಮಾಡುವುದರ ಜೊತೆಗೆ SGS ಲೋ ಬ್ಲೂ ಲೈಟ್ ಸರ್ಟಿಫಿಕೇಶನ್ ಪಡೆದುಕೊಂಡಿದೆ. ಅಲ್ಲದೆ ಇದು ವೆಟ್ ಟಚ್ ಫೀಚರ್ ಅನ್ನು ಹೊಂದಿದ್ದು ಒದ್ದೆ ಕೈಗಳಿಂದಲೂ ಫೋನ್ ಆಪರೇಟ್ ಮಾಡಬಹುದು

ಈ ಹ್ಯಾಂಡ್ ಸೆಟ್ 4nm ತಂತ್ರಜ್ಞಾನ ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 7300 ಚಿಪ್ಸೆಟ್ ಪಡೆದುಕೊಂಡಿದೆ ಮತ್ತು LPDDR4x RAM ಮತ್ತು UFS 2.2 ತಂತ್ರಜ್ಞಾನವನ್ನು ಬಳಸುತ್ತದೆ. ಇದು ಆಂಡ್ರಾಯ್ಡ್ 14 ಆಧಾರಿತ FuntouchOS 14 ಮೂಲಕ ಕೆಲಸ ಮಾಡುತ್ತದೆ. ಮೂರು ವರ್ಷ ಆಂಡ್ರಾಯ್ಡ್ ಅಪ್ಡೇಟ್ಸ್ ಮತ್ತು 4 ವರ್ಷ ಸೆಕ್ಯೂರಿಟಿ ಅಪ್ಡೇಟ್ ಭರವಸೆಯನ್ನು ಕಂಪನಿಯು ನೀಡಿದೆ.

ಕ್ಯಾಮೆರಾ ವಿಷಯಕ್ಕೆ ಬಂದರೆ ಈ ಸ್ಮಾರ್ಟ್ ಫೋನ್ ಔರಾ ಲೈಟ್ ಘಟಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಲೈಟ್ ಬಣ್ಣಗಳ ತಾಪಮಾನ ಹೊಂದಾಣಿಕೆ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು OIS+EIS ಬೆಂಬಲದೊಂದಿಗೆ 50MP Sony IMX882 ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 50MP ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿ ಮತ್ತು ಹಿಂಭಾಗದ ಎರಡು ಕ್ಯಾಮೆರಾಗಳು 4K ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಹ್ಯಾಂಡ್ಸೆಟ್ AI Eraser ಮತ್ತು AI Photeo Enhancer ಫೀಚರ್ ಗಳನ್ನು ಹೊಂದಿದೆ.

Vivo V40e
Representative Image

ವಿವೋ ವಿ30e ಮುಂದುವರೆದ ಆವೃತ್ತಿಯಾಗಿ ಬಂದಿರುವ ಈ ಸ್ಮಾರ್ಟ್ ಫೋನ್ ವಿನ್ಯಾಸದ ಜೊತೆಗೆ ಹಲವು ಅಪ್ಗ್ರೇಡ್ ಗಳನ್ನು ಕಂಡಿದೆ. ಇದು 5500mAh ಬ್ಯಾಟರಿಯನ್ನು ಪಡೆದಿದ್ದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಡಸ್ಟ್ ಮತ್ತು ಸ್ಪ್ಲಾಷ್ ನಿರೋಧಕಕ್ಕಾಗಿ IP54 ರೇಟಿಂಗ್ ಪಡೆದುಕೊಂಡಿದೆ. ಕನೆಕ್ಟಿವಿಟಿ ವಿಷಯದಲ್ಲಿ ಡ್ಯುಯಲ್ ಸಿಮ್ , 5G, 4G, ವೈಫೈ, GPS, OTG, ಬ್ಲೂಟೂತ್ 5.4 ಮತ್ತು ಯುಎಸ್ಬಿ ಟೈಪ್ C ಪೋರ್ಟ್ ಮತ್ತು ಇನ್ ಡಿಸ್ ಪ್ಲೇ ಪಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.

ಇದನ್ನು ಓದಿ: ಟೆಕ್ನೋದಿಂದ ಅಗ್ಗದ ದರಕ್ಕೆ 5G ಸ್ಮಾರ್ಟ್ ಫೋನ್, ಅಕ್ಟೋಬರ್ 7 ರಿಂದ ಮಾರಾಟವಾಗಲಿದೆ ಈ ಫೋನ್

Leave A Reply

Your email address will not be published.