Ultimate magazine theme for WordPress.

Ayushman Card: ಆಯುಷ್ಮಾನ್ ಕಾರ್ಡ್ ಎಲ್ಲಿ ಉಪಯೋಗಿಸಬಹುದು ಮತ್ತು ಇದಕ್ಕೆ ಯಾರು ಅರ್ಹರು ಎಂಬುದನ್ನು ಇಲ್ಲಿ ತಿಳಿಯಿರಿ

Ayushman Card: ಆರ್ಧಿಕವಾಗಿ ದುರ್ಬಲರಾದವರಿಗೆ ಈ ಯೋಜನೆಯ ಮೂಲಕ ರೂ. 5 ಲಕ್ಷದವರೆಗೆ ಚಿಕಿತ್ಸೆ ಪಡೆಯಹಬುದು.

0

Ayushman Card:  ಕೇಂದ್ರ ಸರ್ಕಾರ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರ ( Poor and Economically Backward) ಏಳಿಗೆಗಾಗಿ ಹಲವಾರು ಯೋಜನೆಗಳನ್ನು (Scheme) ರೂಪಿಸಿ ಜಾರಿಗೆ ತಂದಿದೆ. ಅಂತಹವುಗಳ ಪೈಕೆ ಆಯುಷ್ಮಾನ್ ಭಾರತ್ (Ayushman Bharat) ಸಹ ಒಂದಾಗಿದೆ.

ಈ ಯೋಜನೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ (Free Treatment) ಪಡೆಯಬಹುದು. ಹಣಕಾಸಿನ ತೊಂದರೆಯಿಂದ ಬಳುತ್ತಿರುವ ಜನರಿಗೆ ಈ ಯೋಜನೆಯಿಂದ ಪರಿಹಾರ ಸಿಗಲಿದೆ. ಈ ಯೋಜನೆ ಬಡವರ ಪಾಲಿಗೆ ವರದಾನವೆಂದು ಹೇಳಬಹುದು. ಆರ್ಧಿಕವಾಗಿ ದುರ್ಬಲರಾದವರಿಗೆ ಈ ಯೋಜನೆಯ ಮೂಲಕ ರೂ. 5 ಲಕ್ಷದವರೆಗೆ ಚಿಕಿತ್ಸೆ ಪಡೆಯಹಬುದು. ಈ ಕಾರ್ಡಿನ ಅಡಿಯಲ್ಲಿ ಯಾವ ರೋಗಗಳಿಗೆ ಚಿಕಿತ್ಸೆ ಪಡೆಯಬಹುದು ಮತ್ತು ಎಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ವಿವರಗಳನ್ನು ತಿಳಿಯೋಣ ಬನ್ನಿ

ಚಿಕಿತ್ಸೆ ಎಲ್ಲಿ ಪಡೆಯಬಹುದು..? 

ಆಯುಷ್ಮಾನ್ ಕಾರ್ಡ್ (Ayushman Bharat) ಹೊಂದಿರುವ ವ್ಯಕ್ತಿಯ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ದೇಶದ ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಕರೋನಾ (Corona), ಕ್ಯಾನ್ಸರ್ (Cancer), ಕಿಡ್ನಿ (Kidney), ಹೃದಯ(Heart), ಡೆಂಗ್ಯೂ (Dengue), ಚಿಕನ್ ಗುನ್ಯಾ (Chicken Gunya), ಮಲೇರಿಯಾ, ಡಯಾಲಿಸಿಸ್, ಮೊಣಕಾಲು, ಸೊಂಟ, ಕಣ್ಣಿನ ಪೊರೆ ಸೇರಿದಂತೆ ಅನೇಕ ಕಾಯಿಲೆಗಳ ಚಿಕತ್ಸೆಗೆ ಈ ಕಾರ್ಡ್ ಉಪಯೋಗಿಸಬಹುದು.

ಇದನ್ನು ಓದಿ: LIC Policy: ಹೆಣ್ಣುಮಕ್ಕಳ ಮದುವೆ ಚಿಂತೆಗೆ ಗುಡ್ ಬೈ ಹೇಳಿ, ಈ ಪಾಲಿಸಿ ತೆಗೆದುಕೊಂಡರೆ ರೂ. 31 ಲಕ್ಷ ಸಿಗುತ್ತೆ

kannadatips default image
image source: original source

ಆಯುಷ್ಮಾನ್ ಕಾರ್ಡಿಗೆ ಯಾರು ಅರ್ಹರು..?  

ಬಡವರು ಆಯುಷ್ಮಾನ್ ಕಾರ್ಡಿನ ಪ್ರಯೋಜನವನ್ನು ಪಡೆಯಬಹುದು. ಕೊಳೆಗೇರಿಗಳಲ್ಲಿ ವಾಸಿಸುವ ಜನರು, ಭೂರಹಿತರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಗ್ರಾಮೀಣ ಪ್ರದೇಶ ಜನರು, ಬಡತನ ರೇಖೆಗಿಂತ ಕೆಳಗಿರುವ ಜನರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

 ಇದನ್ನು ಓದಿ: Post office: ಪೋಸ್ಟ್ ಆಫೀಸ್ ಬೆಸ್ಟ್ ಪ್ಲಾನ್, ಕೇವಲ 399 ರೂಪಾಯಿಗೆ ಸಿಗುತ್ತೆ ರೂ.10 ಲಕ್ಷ ಬೆನಫಿಟ್ಸ್

ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ..?

ಆಯುಷ್ಮಾನ್ ಕಾರ್ಡ್ ಪಡೆಯಲು ಮೊದಲು ಅಧಿಕೃತ ಪೋರ್ಟಲ್ merq.pmjay.gov.in ಗೆ ಲಾಗಿನ್ ಆಗಬೇಕು

ನಿಮ್ಮ ಮೊಬೈಲ್ ನಂಬರ್ , ಕ್ಯಾಪ್ಚಾ ಕೋಡ್ ಎಂಟರ್ ಮಾಡಬೇಕು

ನೀವು ನೋಂದಣಿ ಮಾಡಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ ಅದನ್ನು ಅಲ್ಲಿ ಎಂಟರ್ ಮಾಡಬೇಕು

ಆಗ ಹೊಸ ಪೇಜ್ ಓಪನ್ ಆಗುತ್ತೆ. ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು

ಹೆಸರು, ಮೊಬೈಲ್ ನಂಬರ್, ರೇಷನ್ ಕಾರ್ಡ್, ಇತ್ಯಾದಿ ವಿವರಗಳನ್ನು ಭರ್ತಿ ಮಾಡಬೇಕು

ನಂತರ ಪೇಜಿನ ಎಡಭಾಗದಲ್ಲಿ ಕುಟುಂಬ ಸದಸ್ಯರು ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಸದಸ್ಯರ ಹೆಸರುಗಳನ್ನು ಸೇರಿಸಿಬೇಕು

ನಂತರ ಸರ್ಕಾರ ನಿಮಗೆ ಆಯುಷ್ಮಾನ್ ಕಾರ್ಡ್ ಅನ್ನು ನೀಡುತ್ತದೆ.

ಅದನ್ನು ಎಲ್ಲಿ ಬೇಕಾದರೂ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಬಳಸಬಹುದು.

Leave A Reply

Your email address will not be published.