Ultimate magazine theme for WordPress.

ಶಿಯೋಮಿ ದೀಪಾವಳಿ ಸೇಲ್ 2024, ಈ ಸ್ಮಾರ್ಟ್ ಫೋನುಗಳ ಮೇಲೆ ಸಖತ್ ರಿಯಾಯಿತಿ

ಪ್ರಸ್ತುತ 8GB/256GB ಸ್ಟೋರೇಜ್ ಸ್ಮಾರ್ಟ್ ಫೋನ್ ಅನ್ನು ಕಂಪನಿಯು ತನ್ನ ಶಿಯೋಮಿ ಇಂಡಿಯಾದ ವೆಬ್ಸೈಟ್ ನಲ್ಲಿ ಬ್ಯಾಂಕ್ ಆಫರ್ ಗಳೊಂದಿಗೆ ರೂ. 37,999 ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

0

ಭಾರತದಲ್ಲಿ ಪ್ರಮುಖ ಹಬ್ಬಗಳ ಪೈಕಿ ದೀಪಾವಳಿಯು ಒಂದು. ಈ ಹಬ್ಬದಲ್ಲಿ ಹಲವರು ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಹೀಗಾಗಿ ಎಲ್ಲಾ ಇ-ಕಾಮರ್ಸ್ ಕಂಪನಿಗಳು ಮತ್ತು ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಡಿಸ್ಕೌಂಟ್ ಕೊಡುವುದರ ಮೂಲಕ ಗ್ರಾಹಕರ ಕೊಳ್ಳುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಪ್ರಮುಖ ಸ್ಮಾರ್ಟ್ ಫೋನ್ ಮೇಕರ್ ಕಂಪನಿಯು ಶಿಯೋಮಿಯು ಭಾರತದಲ್ಲಿ ದೀಪಾವಳಿ ಸೇಲ್ 2024 ರನ್ನು (Xiaomi Diwali Sale 2024) ಆರಂಭಿಸಿದೆ. ಈ ಸೇಲ್ ನಲ್ಲಿ ಶಿಯೋಮಿ 14, ಶಿಯೋ 14 ಸಿವಿ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಕಡಿಮೆ ಮಾಡಿದೆ. ಅಲ್ಲದೆ ಇವುಗಳ ಮೇಲೆ ಬ್ಯಾಂಕ್ ಆಫರ್ ಅನ್ನು ಸಹ ಘೋಷಿಸಿದೆ.

kannadatips default image
image source: original source

ಶಿಯೋಮಿ 14 ಸಿವಿ ಸ್ಮಾರ್ಟ್ ಫೋನ್

ಪ್ರಸ್ತುತ 8GB/256GB ಸ್ಟೋರೇಜ್ ಸ್ಮಾರ್ಟ್ ಫೋನ್ ಅನ್ನು ಕಂಪನಿಯು ತನ್ನ ಶಿಯೋಮಿ ಇಂಡಿಯಾದ ವೆಬ್ಸೈಟ್ ನಲ್ಲಿ ಬ್ಯಾಂಕ್ ಆಫರ್ ಗಳೊಂದಿಗೆ ರೂ. 37,999 ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದಲ್ಲಿ ಹಳೆಯ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಮೂಲಕ ರೂ. 3000 ಎಕ್ಸ್ ಚೇಂಜ್ ಬೋನಸ್ ಅನ್ನು ಪಡೆದುಕೊಳ್ಳಬಹುದು ಇದಲ್ಲದೆ ಕೂಪನ್ ಕೋಡ್ ಮೂಲಕ ರೂ. 1000 ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಶಿಯೋಮಿ 14 ಸಿವಿ ಸ್ಪೆಸಿಫಿಕೇಶನ್ಸ್

ಶಿಯೋಮಿ 14 ಸಿವಿ 6.55 ಇಂಚಿನ ಕ್ವಾಡ್ ಕರ್ವ್ಡ್ AMOLED ಡಿಸ್ ಪ್ಲೇಯನ್ನು ಹೊಂದಿದೆ. ಇದು ಸ್ನಾಪ್ ಡ್ರ್ಯಾಗನ್ 8s ಜೆನ್ 3 Soc ಚಿಪ್ಸೆಟ್ ಮೂಲಕ ಕೆಲಸ ಮಾಡುತ್ತದೆ. ಇದು ವೇಗವಾಗಿ ಕೆಲಸ ಮಾಡಲು LPDDR5X RAM ಮತ್ತು ‌UFS 4.0 ತಂತ್ರಜ್ಞಾನವನ್ನು ಬಳಸುತ್ತದೆ. ಇನ್ನು ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗುವುದನ್ನು ತಪ್ಪಿಸಲು ಐಸ್ ಲೂಪ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ.

Xiaomi 14 Civi
Representative Image

ಕ್ಯಾಮೆರಾ ವಿಷಯದಲ್ಲಿ ಈ ಫೋನ್ 50MP+50MP+32MP ಕ್ಯಾಮೆರಾದ ಜೊತೆಗೆ ಎರಡು ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 32MP+32MP ಕ್ಯಾಮೆರಾವನ್ನು ಹೊಂದಿದೆ. ಇದು 4700mAh ಬ್ಯಾಟರಿಯನ್ನು ಹೊಂದಿದ್ದು 67W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಶಿಯೋಮಿ 14 ಸ್ಮಾರ್ಟ್ ಫೋನ್

ಶಿಯೋಮಿ 14 ಫೋನಿನ 12GB RAM/256GB ಸ್ಟೋರೇಜ್ ವೇರಿಯೆಂಟ್ ರೂ. 59,999 ಬೆಲೆಯನ್ನು ಹೊಂದಿದೆ. ಆಯ್ದ ಬ್ಯಾಂಕ್ ಕಾರ್ಡ್ ಗಳ ಮೂಲಕ ಖರೀದಿಸಿದರೆ ರೂ. 10,000 ತನಕ ರಿಯಾಯಿತಿ ಪಡೆಯಬಹುದು ಅಲ್ಲದೆ ಆಯ್ದ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಮಾಡುವ ಮೂಲಕ ರೂ. 8000 ಎಕ್ಸ್ ಚೇಂಜ್ ಬೋನಸ್ ಪಡೆದುಕೊಳ್ಳಬಹುದು.

ಇದನ್ನು ಓದಿ: ಟೆಕ್ನೋದಿಂದ ಅಗ್ಗದ ದರಕ್ಕೆ 5G ಸ್ಮಾರ್ಟ್ ಫೋನ್, ಅಕ್ಟೋಬರ್ 7 ರಿಂದ ಮಾರಾಟವಾಗಲಿದೆ ಈ ಫೋನ್

ಶಿಯೋಮಿ 14 ಸ್ಪೆಸಿಫಿಕೇಶನ್ಸ್

ಈ ಹ್ಯಾಂಡ್ ಸೆಟ್ 6.36 ಇಂಚಿನ LTPO AMOLED ಡಿಸ್ ಪ್ಲೇಯನ್ನು ಹೊಂದಿದೆ. ಈ ಡಿಸ್ ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ HYperOS ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಹ್ಯಾಂಡ್ ಸೆಟ್ ಸ್ನಾಪ್ ಡ್ರ್ಯಾಗನ್ 8 ಜೆನ್ 3 ಚಿಪ್ಸೆಟ್ ಜೊತೆಗೆ Adreno 750 GPU ಹೊಂದಿದ್ದು ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ.

Xiaomi 14 Smartphone
Representative Image

ಕ್ಯಾಮೆರಾದ ಬಗ್ಗೆ ನೋಡುವುದಾದಾರೆ ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ. 50MP+50MP+50MP ಕ್ಯಾಮೆರಾವನ್ನು ಒಳಗೊಂಡಿದೆ ಇದರ ಜೊತೆಗೆ ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32MP ಕ್ಯಾಮೆರಾವನ್ನು ಒಳಗೊಂಡಿದೆ. ಇದು 90W ವೈರ್ಡ್ ಚಾರ್ಜಿಂಗ್, 50W ವೈರ್ಲೆಸ್ ಚಾರ್ಜಿಂಗ್, 10W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 4610mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಇದನ್ನು ಓದಿ: Oppo K12x 5G ಫೋನಿನಲ್ಲಿ ಹೊಸ ವೆರಿಯೆಂಟ್ ಬಿಡುಗಡೆ, ಸೇಲ್ ಮತ್ತು ಬೆಲೆ ವಿವರ ಇಲ್ಲಿದೆ

Leave A Reply

Your email address will not be published.