Ultimate magazine theme for WordPress.

ಸ್ವಿಗ್ಗಿ ಮತ್ತು ಜೊಮಾಟೋ ಗ್ರಾಹಕರಿಗೆ ಶಾಕ್, ದಿಢೀರನೆ ಶುಲ್ಕ ಹೆಚ್ಚಿಸಿದ ಕಂಪನಿಗಳು

ಈ ಎರಡು ಕಂಪನಿಗಳು 2 ರೂಪಾಯಿಯೊಂದಿಗೆ 2023 ರಲ್ಲಿ ಫೀಜ್ ವಸೂಲಿ ಮಾಡಲು ಪ್ರಾರಂಭಿಸಿದವು

0

ಆನ್ಲೈನ್ ನಲ್ಲಿ ಫುಡ್ ಆರ್ಡ್ ಮಾಡಬೇಕು ಎಂದಾಕ್ಷಣ ಥಟ್ ಅಂತಾ ನೆನಪಿಗೆ ಬರುವ ಸ್ವಿಗ್ಗಿ ಮತ್ತು ಜೊಮಾಟೋ ಆ್ಯಪ್ ಗಳು ಗ್ರಾಹಕರಿಗೆ ಶಾಕ್ ಕೊಟ್ಟಿವೆ. ಆನ್ ಟೈಮ್ ಗೆ ಫುಡ್ ಡೆಲಿವರಿ ಮಾಡುವ ಸ್ವಿಗ್ಗಿ ಜೊಮಾಟೋ ಪ್ಲಾಟ್ ಫಾರ್ಮ್ ಗಳು ಶುಲ್ಕವನ್ನು ಹೆಚ್ಚಿಸಿವೆ. ಇನ್ನುಂದೆ ಈ ಆ್ಯಪ್ ಗಳಲ್ಲಿ ಫುಡ್ ಆರ್ಡರ್ ಮಾಡುವವರು ಹೆಚ್ಚಿಗೆ ಪಾವತಿಸಬೇಕಾಗುತ್ತದೆ.

kannadatips default image
image source: original source

ಹಲವು ನಗರಗಳಲ್ಲಿ ಡೆಲಿವರಿ ಶುಲ್ಕ ಹೆಚ್ಚಳ 

ದೆಹಲಿ, ಮುಂಬೈ ಮತ್ತು ಬೆಂಗಳೂರು ನಂತಹ ಬೇಡಿಕೆ ಹೆಚ್ಚಿರುವ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಿಸಿದೆ. ಪ್ರಮುಖ ನಗರಗಳಲ್ಲಿ 5 ರೂಪಾಯಿ ವಸೂಲಿ ಮಾಡುತ್ತಿದ್ದ ಕಂಪನಿಗಳು 6 ರೂಪಾಯಿ ವಸೂಲಿ ಮಾಡಲಿದೆ. ಜೊಮಾಟೋ ಮತ್ತು ಸ್ವಿಗ್ಗಿ ಕಂಪನಿಗಳು ಶುಲ್ಕವನ್ನು ಹೆಚ್ಚಿಸುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ಎರಡು ಕಂಪನಿಗಳು ಒಟ್ಟಿಗೆ ಶುಲ್ಕವನ್ನು ಹೆಚ್ಚಿಸಿದ್ದವು.

ಈ ಎರಡು ಕಂಪನಿಗಳು 2 ರೂಪಾಯಿಯೊಂದಿಗೆ 2023 ರಲ್ಲಿ ಫೀಜ್ ವಸೂಲಿ ಮಾಡಲು ಪ್ರಾರಂಭಿಸಿದವು ನಂತರ ಕ್ರಮವಾಗಿ ಶುಲ್ಕವನ್ನು ಹೆಚ್ಚುತ್ತಾ ಬಂದವು. 2 ರೂಪಾಯಿಂದ 3 ರೂಪಾಯಿಗೆ 3 ರೂಪಾಯಿಂದ 4 ರೂಪಾಯಿಗೆ ಹೆಚ್ಚಿಸಿದ್ದವು. ಜೊಮಾಟೋ ಏಪ್ರಿಲ್ ತಿಂಗಳಿನಲ್ಲಿ ಶೇಕಡಾ 25 ರಷ್ಟು ಹೆಚ್ಚಿಸಿ 5 ರೂಪಾಯಿಗೆ ತಂದು ನಿಲ್ಲಿಸಿತ್ತು. ಇದೀಗ ಮತ್ತೆ ಫೀಜ್ ಹೆಚ್ಚಿಸುವ ಮೂಲಕ 6 ರೂಪಾಯಿಗೆ ಬಂದು ನಿಂತಿದೆ. ಇದಲ್ಲದೆ ಜೊಮಾಟೊ ಕಂಪನಿಯು ಸ್ಪೀಡ್ ಡೆಲಿವರಿ ಹೆಸರಿನಲ್ಲಿ ಪ್ರಿಯಾಟಿರಿ ಫೀಜ್ ಎಂದು ಪ್ರತ್ಯೇಕವಾಗಿ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಒಂದು ಆರ್ಡರ್ ಮೇಲೆ ಬರುವ ಸಗಟು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ಶುಲ್ಕವನ್ನು ಹೆಚ್ಚಿಸಿವೆ.

ಇದನ್ನು ಓದಿ: ಜಿಯೋ, ಐರ್ಟೆಲ್, ವೋಡಾಫೋನ್ ಬಳಕೆದಾರರಿಗೆ ಹೊಸ ರೂಲ್ಸ್, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

Leave A Reply

Your email address will not be published.